ಕರ್ನಾಟಕ

karnataka

ETV Bharat / state

ಮತಾಂತರ ನಿಷೇಧವಿದ್ದರೂ ಮತಾಂತರ ನಿಂತಿಲ್ಲ: ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಗರಂ - ಪಾಲಕರು ಕ್ರೈಸ್ತ ಕಾನ್ವೆಂಟ್​ಗೆ ಮಕ್ಕಳನ್ನು ಕಳುಹಿಸಬೇಡಿ

ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಎರಡೂ ರಾಜ್ಯಗಳ ರಾಜಕೀಯಕ್ಕೆ ಬಳಕೆ - ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ಷೇಪ.

Pramod Muthalik
ಶ್ರೀ ರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್

By

Published : Dec 6, 2022, 4:49 PM IST

Updated : Dec 6, 2022, 11:01 PM IST

ಕೊಪ್ಪಳ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಾಗಿದ್ದರೂ ಮತಾಂತರ ನಿಂತಿಲ್ಲ. ಬಿಜೆಪಿ ಸರಕಾರ ಈ ಕುರಿತು ಕಾನೂನು ಜಾರಿ ಮಾಡಿ ಕೈ ತೊಳೆದು ಕೊಂಡಿದೆ. ಕೇವಲ ಕಾನೂನು ಮಾಡಿದರೆ ಸಾಲದು ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು ಎಂದು ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ 3000 ಅನಧಿಕೃತ ಚರ್ಚ್​ಗಳಿದ್ದು, ಅವುಗಳನ್ನು ತೆರವುಗೊಳಿಸಬೇಕು. ಪಾಲಕರು ಕ್ರೈಸ್ತ ಕಾನ್ವೆಂಟ್​ಗೆ ಮಕ್ಕಳನ್ನು ಕಳುಹಿಸಬೇಡಿ. ರಾಜ್ಯದಲ್ಲಿ ಮೊದಲು ಕನ್ನಡ ಶಾಲೆಗಳನ್ನು ಅಭಿವೃದ್ದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಎರಡೂ ರಾಜ್ಯಗಳ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಸಹೋದರತ್ವದಿಂದ ಬದುಕುತ್ತಿದ್ದಾರೆ. ಜನರ ಭಾವನೆಗಳ ಜತೆಗೆ ಕರ್ನಾಟಕದ ಬಿಜೆಪಿ, ಮಹಾರಾಷ್ಟ್ರ ಬಿಜೆಪಿಯವರು ರಾಜಕೀಯ ಮಾಡುತ್ತಿರುವುದಕ್ಕೆ ನನ್ನ ಧಿಕ್ಕಾರವಿದೆ ಎಂದರು.

ಶೌರ್ಯ ದಿನ ಇಂದು:ಇಂದು ಬಾಬರಿ ಮಸೀದಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಶೌರ್ಯ ದಿನ ಆಚರಿಸಲಾಗುತ್ತಿದೆ. ಆ ನಿಮಿತ್ತ ಭಾಗ್ಯನಗರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಂತರ ಭಾಗ್ಯನಗರದ ಶ್ರೀರಾಮ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ:ಬೆಳಗಾವಿ ಪ್ರವೇಶಕ್ಕೆ ಕನ್ನಡಪರ ಹೋರಾಟಗಾರರಿಗೆ ಪೊಲೀಸರ ತಡೆ.. ಗಡಿಯಲ್ಲಿ ಹೆಚ್ಚಿದ ತಿಕ್ಕಾಟ

Last Updated : Dec 6, 2022, 11:01 PM IST

ABOUT THE AUTHOR

...view details