ಕರ್ನಾಟಕ

karnataka

ETV Bharat / state

ನಾಲ್ಕು ಗುಂಟೆ ಜಮೀನಿನಲ್ಲಿ ಗುಲಾಬಿ ಹೂವಿನ ಕೃಷಿ.. ಲಾಭದಾಯಕ ಎಂದ ರೈತ - rose flower farming at kushtagi

ರೈತ ವೀರಭದ್ರಯ್ಯ ಗುರುಬಸಯ್ಯ ಹಿರೇಮಠ ಅವರು ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಗುಲಾಬಿ ಹೂ ಕೃಷಿಯಿಂದ ಪ್ರತಿ ತಿಂಗಳು ಸರಾಸರಿ 10 ಸಾವಿರ ರೂ. ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

Profitable rose flower farming at kushtagi
ನಾಲ್ಕು ಗುಂಟೆ ಜಮೀನಿನಲ್ಲಿ ಗುಲಾಬಿ ಹೂವಿನ ಕೃಷಿ...ಲಾಭದಾಯಕ ಎಂದ ರೈತ

By

Published : Feb 4, 2021, 11:55 AM IST

ಕುಷ್ಟಗಿ(ಕೊಪ್ಪಳ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಳವಗೇರಾ ಗ್ರಾಮದ ರೈತ ವೀರಭದ್ರಯ್ಯ ಗುರುಬಸಯ್ಯ ಹಿರೇಮಠ ಅವರು ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಗುಲಾಬಿ ಹೂ ಕೃಷಿಯಿಂದ ಪ್ರತಿ ತಿಂಗಳು ಸರಾಸರಿ 10 ಸಾವಿರ ರೂ. ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ನಾಲ್ಕು ಗುಂಟೆ ಜಮೀನಿನಲ್ಲಿ ಗುಲಾಬಿ ಹೂವಿನ ಕೃಷಿ

ಗುಲಾಬಿ ಕೃಷಿಯಲ್ಲಿ ಕನಿಷ್ಠ 12 ವರ್ಷ ನಿರಂತರ ಇಳುವರಿ ನಿರೀಕ್ಷಿಸಿಲು ಸಾಧ್ಯವಿದೆ. ತಮ್ಮ ಜಮೀನಿನಲ್ಲಿ 3 ಎಕರೆ ಬಾಳೆ ನಾಟಿ ಮಾಡಿದ್ದು, 4 ಗುಂಟೆ ಜಮೀನಿನಲ್ಲಿ ಗುಲಾಬಿ ಕೃಷಿ ಕೈಗೊಂಡಿದ್ದಾರೆ. ಆನೇಕಲ್ ತಾಲೂಕು ಹೊಸೂರಿನಲ್ಲಿ ಪ್ರತಿ ಗುಲಾಬಿ ಸಸಿಗೆ 20 ರೂ. ಹಾಗೂ ಪ್ರತಿ ಸಸಿಯ ಸಾಗಣೆ ವೆಚ್ಚ 5 ರೂ. ಸೇರಿ ಒಟ್ಟು 25 ರೂ. ನಂತೆ 600 ಗುಲಾಬಿ ಸಸಿಗಳಿಗೆ 15 ಸಾವಿರ ರೂ. ವ್ಯಯಿಸಿ ತಂದಿದ್ದಾರೆ. ತಿಪ್ಪೆಗೊಬ್ಬರ, ಹನಿ ನೀರಾವರಿಗೆ 15 ರಿಂದ 20 ಸಾವಿರ ರೂ. ಖರ್ಚಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ನಿರಂತರ ಹೂ ಕಟಾವು ನಡೆಯುತ್ತಿದ್ದು, ಆರಂಭಿಕ ಹಂತದಲ್ಲಿ 200 ಹೂಗಳು, ಇದೀಗ 600ಕ್ಕೂ ಅಧಿಕ ಹೂಗಳನ್ನು ಕಟಾವು‌ ಮಾಡಿ ಮಾರುಕಟ್ಟೆಯಲ್ಲಿ ಹೂ ಮಾರುವವರಿಗೆ 1ರೂ.ನಂತೆ ಮಾರಾಟ ಮಾಡಲಾಗುತ್ತಿದೆ. 6 ತಿಂಗಳ ಬಳಿಕ ಹೂಗಳನ್ನು ಕಟಾವು ಮಾಡಿ ಇಳುವರಿ ಜಾಸ್ತಿಯಾಗುತ್ತಿದ್ದು, ಪ್ರತಿ ತಿಂಗಳ ಸರಾಸರಿ 10 ಸಾವಿರ ರೂ. ಕಡಿಮೆಯಾಗದಂತೆ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ರೈತ ವೀರಭದ್ರಯ್ಯ ಹಿರೇಮಠ.

ಈ ಸುದ್ದಿಯನ್ನೂ ಓದಿ:ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಬಳಿಯಿದ್ದ ಅನ್​ಲೋಡೆಡ್ ಗನ್ ಕದ್ದ ಖದೀಮರು!

ಈ ಪ್ರದೇಶದ ಬಿಸಿಲು ಪುಷ್ಪ ಕೃಷಿಗೆ ವರವಾಗಿದೆ. ಕಳೆದ 2014ರಲ್ಲಿ 20 ಗುಂಟೆಯಲ್ಲಿ ಗುಲಾಬಿ ಕೃಷಿಯಿಂದ 75 ಸಾವಿರ ಆದಾಯವಾಗಿತ್ತು. ಬಳಿಕ ಲಾಕ್​ಡೌನ್ ಸಂದರ್ಭದಲ್ಲಿ ಹೂ ಮಾರಾಟವಾಗಲಿಲ್ಲ. ಅದನ್ನು ಅಲ್ಲಿಗೆ ಕೈ ಬಿಟ್ಟು, ಸದ್ಯ 4 ಗುಂಟೆಯಲ್ಲಿ ಈ ಗುಲಾಬಿ ಕೃಷಿ ಕೈಗೊಂಡಿದ್ದು, ನಿರ್ವಹಣೆ ಸಹ ಸುಲಭ ಮತ್ತು ಲಾಭದಾಯಕವೆನಿಸಿದೆ. ಗುಲಾಬಿ ಕೃಷಿ ಲಾಭದಾಯಕ ಎಂದು ಖಾತ್ರಿಯಾಗಿದ್ದು, ಮುಂದಿನ ಹಂತದಲ್ಲಿ ಕ್ಷೇತ್ರ ವಿಸ್ತರಿಸಿ ಬಟನ್ ಗುಲಾಬಿ ನಾಟಿ ಮಾಡುವ ಉದ್ದೇಶವಿದೆ. ಕ್ಷೇತ್ರ ವಿಸ್ತರಿಸುವುದಾಗಿ ಹೇಳಿ ಮಾಹಿತಿ ನೀಡಿದರು.

ABOUT THE AUTHOR

...view details