ಗಂಗಾವತಿ: ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸುಳ್ಳು ಹೇಳಿದ್ದರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರನ್ನು ಸರ್ಕಾರ ಅಮಾನತು ಮಾಡಲಿ ಎಂದು ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಒಂದು ಹೇಳಿಕೆ ನೀಡುತ್ತಿದ್ದರೆ, ಪೊಲೀಸ್ ಇಲಾಖೆ ಮತ್ತೊಂದು ಕಾರಣ ನೀಡುತ್ತಿದೆ.
ಚಂದ್ರು ಹತ್ಯೆ ಕೇಸ್ನಲ್ಲಿ ಕಮಿಷನರ್ ಸುಳ್ಳು ಹೇಳಿದ್ರೆ ಅವರನ್ನ ಅಮಾನತು ಮಾಡಿ : ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲು - ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲು
ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಸುಳ್ಳು ಹೇಳಿರಬೇಕು ಇಲ್ಲವೇ ಪೊಲೀಸ್ ಕಮಿಷನರ್ ಸುಳ್ಳು ಹೇಳಿರಬೇಕು. ಒಂದೊಮ್ಮೆ ಕಮಿಷನರ್ ಸುಳ್ಳು ಹೇಳಿ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನಿಸಿದ್ದರೆ ಅವರನ್ನ ಸಸ್ಪೆಂಡ್ ಮಾಡಿ ಅಂತಾ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು..
![ಚಂದ್ರು ಹತ್ಯೆ ಕೇಸ್ನಲ್ಲಿ ಕಮಿಷನರ್ ಸುಳ್ಳು ಹೇಳಿದ್ರೆ ಅವರನ್ನ ಅಮಾನತು ಮಾಡಿ : ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಸವಾಲು ಪ್ರಿಯಾಂಕ್ ಖರ್ಗೆ](https://etvbharatimages.akamaized.net/etvbharat/prod-images/768-512-14979831-thumbnail-3x2-lek.jpg)
ಪ್ರಿಯಾಂಕ್ ಖರ್ಗೆ
ಗೃಹ ಸಚಿವರು ಸುಳ್ಳು ಹೇಳಿರಬೇಕು ಇಲ್ಲವೇ ಪೊಲೀಸ್ ಕಮಿಷನರ್ ಸುಳ್ಳು ಹೇಳಿರಬೇಕು. ಒಂದೊಮ್ಮೆ ಕಮಿಷನರ್ ಸುಳ್ಳು ಹೇಳಿ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನಿಸಿದ್ದರೆ ಅವರನ್ನ ಸಸ್ಪೆಂಡ್ ಮಾಡಿ. ಇಲ್ಲವೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಲಿ. ರಾಜ್ಯದಲ್ಲಿ ಸರ್ಕಾರವೇ ಮುಂದೆ ನಿಂತು ಜನರಲ್ಲಿ ಕೋಮು ಭಾವನೆ ಪ್ರಚೋದಿಸುವ ಕೆಲಸಕ್ಕೆ ಕೈ ಹಾಕುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿರುವುದು..
ಇದನ್ನೂ ಓದಿ:ಈ ರೀತಿ ರಾಜಕಾರಣದಿಂದ ಬಿಜೆಪಿಯವರು ಅದೇನು ಸಾಧಿಸಲು ಹೊರಟಿದ್ದಾರೋ: ಜಮೀರ್ ಅಹ್ಮದ್ ಟೀಕೆ