ಗಂಗಾವತಿ :ಕೊಪ್ಪಳ - ರಾಯಚೂರು ಹೆದ್ದಾರಿಯಲ್ಲಿ ನಡೆದಿದ್ದ ರಸ್ತೆ ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಗಂಗಾವತಿ ಗ್ರಾಮೀಣ ಪಿಎಸ್ಐ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಅಪಘಾತ ಪರಿಶೀಲಿಸಲು ಹೋದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಸರಕು ಸಾಗಣೆ ವಾಹನ - koppal crime news
ಕೊಪ್ಪಳ- ರಾಯಚೂರು ಹೆದ್ದಾರಿಯ ದಾಸನಾಳ ಸಮೀಪದ ಎಚ್.ಜಿ .ರಾಮುಲು ನಗರದಲ್ಲಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಈ ಕುರಿತು ತನಿಖೆ ನಡೆಸಲು ಹೋದ ಪೊಲೀಸ್ ವಾಹನಕ್ಕೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಗಂಗಾವತಿ ಗ್ರಾಮೀಣ ಪಿಎಸ್ಐ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಮಧ್ಯರಾತ್ರಿ ದಾಸನಾಳ ಸಮೀಪದ ಎಚ್.ಜಿ .ರಾಮುಲು ನಗರದಲ್ಲಿ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಈ ಕುರಿತು ಮಾಹಿತಿ ಪಡೆಯಲು ಪಿಎಸ್ಐ ದೊಡ್ಡಪ್ಪ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದರು. ಈ ವೇಳೆ ವಿಆರ್ಎಲ್ ಸಂಸ್ಥೆಯ ಸರಕು ಸಾಗಣೆ ವಾಹನ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದನ್ನು ಕಂಡ ಪಿಎಸ್ಐ ದೂರಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಇಲಾಖೆಯ ವಾಹನ ಸಂಪೂರ್ಣ ಜಖಂಗೊಂಡಿದ್ದು, ಪಿಎಸ್ಐ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಸರಕು ವಾಹನ ಸಂಸ್ಥೆಯವರು ವಾಹನ ದುರಸ್ತಿ ಮಾಡಿಸಿಕೊಡುವುದಾಗಿ ಹೇಳಿದ್ದು, ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ಪಿಎಸ್ಐ ದೊಡ್ಡಪ್ಪ ತಿಳಿಸಿದರು.