ಕರ್ನಾಟಕ

karnataka

ETV Bharat / state

ಬಿತ್ತನೆ ಪೂರ್ವದಲ್ಲಿಯೇ ಬೆಳೆಗೆ ಬೆಲೆ ನಿಗದಿ ಅಗತ್ಯ:  ಬೆಳಗುಕರ್​ ಹನುಮನಗೌಡ ಪ್ರತಿಪಾದನೆ

ಕೃಷಿ ವಲಯವನ್ನು ಅಭಿವೃದ್ಧಿಪಡಿಸಲು ಬಿತ್ತನೆ ಪೂರ್ವದಲ್ಲಿಯೇ ಬೆಳೆಗೆ ಬೆಲೆ ನಿಗದಿ ಮಾಡುವ ಯೋಜನೆ ಜಾರಿ ಮಾಡುವ ಅಗತ್ಯವಿದೆಯೆಂದು ರಾಜ್ಯ ಸರ್ಕಾರದ ಕೃಷಿ ಬೆಳೆ ಬೆಲೆ ಆಯೋಗದ ಅಧ್ಯಕ್ಷ, ಹಿರಿಯ ರೈತ ಮುಖಂಡ ಬೆಳಗುಕರ್​ ಹನುಮನಗೌಡ ತಿಳಿಸಿದರು.

ಬಿತ್ತನೆ ಪೂರ್ವದಲ್ಲಿಯೇ ಬೆಳೆಗೆ ಬೆಲೆ ನಿಗದಿಗಾಗಿ ಯೋಜನೆ ಜಾರಿ ಮಾಡುವುದು ಅಗತ್ಯ :  ಬೆಳಗುಕರ್​ ಹನುಮನಗೌಡ

By

Published : Sep 11, 2019, 11:23 AM IST

ಗಂಗಾವತಿ:ತೀರಾ ಸಂಕಷ್ಟದಲ್ಲಿರುವ ಕೃಷಿ ವಲಯವನ್ನು ಅಭಿವೃದ್ಧಿಪಡಿಸಲು ಬಿತ್ತನೆ ಪೂರ್ವದಲ್ಲಿಯೇ ಬೆಳೆಗೆ ಬೆಲೆ ನಿಗದಿ ಪಡಿಸಲು ಯೋಜನೆ ಜಾರಿ ಮಾಡುವುದು ಅಗತ್ಯವಿದೆಯೆಂದು ರಾಜ್ಯ ಸರ್ಕಾರದ ಕೃಷಿ ಬೆಳೆ ಬೆಲೆಯ ಆಯೋಗದ ಅಧ್ಯಕ್ಷ ಹಿರಿಯ ರೈತ ಮುಖಂಡ ಬೆಳಗುಕರ್​ ಹನುಮನಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಆಯೋಗದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಹನುಮನಗೌಡ ಅವರು, ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಗೌರವ ಸ್ವೀಕರಿಸಿ ರೈತ ಮುಖಂಡರೊಂದಿಗೆ ಚರ್ಚಿಸಿ ಬಳಿಕ ಮಾತನಾಡಿದ ಅವರು, ಬಿತ್ತನೆ ಪೂರ್ವದಲ್ಲಿಯೇ ಯಾವ ಬೆಳೆಗೆ ಎಷ್ಟು ಬೆಲೆ ನಿಗದಿ ಮಾಡಬೇಕೆಂಬ ಚಿಂತನೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿದೆ. ಇದಕ್ಕೆ ಪೂರಕವಾಗಿ ನಮ್ಮ ಆಯೋಗದಿಂದಲೂ ವರದಿ ನೀಡಿ ಯೋಜನೆ ಜಾರಿಗೆ ಯತ್ನಿಸಲಾಗುವುದು ಎಂದರು.

ಜೊತೆಗೆ, ಬೆಳೆಗೆ ಬೆಲೆ ನಿಗದಿ ಮಾಡುವ ಬಗ್ಗೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ. 75 ಅನುಭವಿ ರೈತರನ್ನೊಳಗೊಂಡು ಕೃಷಿ ವೆಚ್ಚಗಳ ಕಡಿತ ಸಮಿತಿ ರಚಿಸಿ, ಕೃಷಿ ಚಟುವಟಿಕೆ ವೆಚ್ಚದ ಬಗ್ಗೆ ನಿಯಂತ್ರಣ ಸಾಧಿಸುವುದು ನಮ್ಮ ಉದ್ದೇಶ ಎಂದರು

ABOUT THE AUTHOR

...view details