ಕರ್ನಾಟಕ

karnataka

ETV Bharat / state

ತುಂಗಭದ್ರಾ ಜಲಾಶಯ ಮಂಡಳಿ ಅಧ್ಯಕ್ಷ, ಕಾರ್ಯದರ್ಶಿ ಬದಲಾಗ್ಬೇಕು..  ಹಂಪನಗೌಡ ಬಾದರ್ಲಿ - ಮಾಜಿ ಶಾಸಕ ಹಂಪನಗೌಡ ಬಾದರ್ಲಿ

ತುಂಗಭದ್ರಾ ಜಲಾಶಯ ಮಂಡಳಿಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿಯೂ ಸೇರಿ ಬಹುತೇಕರು ಆಂಧ್ರ ಮೂಲದವರೇ ಇರುವ ಕಾರಣ, ನೀರು ಹಂಚಿಕೆ ವಿಚಾರದಲ್ಲಿ ತಾರತಮ್ಯವಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕು ಎಂದು ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದ್ದಾರೆ.

ಹಂಪನಗೌಡ ಬಾದರ್ಲಿ

By

Published : Aug 17, 2019, 4:37 PM IST

ಕೊಪ್ಪಳ:ತುಂಗಭದ್ರಾ ಮಂಡಳಿಯಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಬದಲಾಗಬೇಕು ಎಂದು ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದ್ದಾರೆ.

ತುಂಗಭದ್ರಾ ಮಂಡಳಿಯ ತಾರತಮ್ಯಕ್ಕೆ ಕಿಡಿ ಕಾರಿದ ಶಾಸಕರು..

ತಾಲೂಕಿನ ಮುನಿರಾಬಾದ್​ನಲ್ಲಿ ಮಾತನಾಡಿದ ಅವರು, ತುಂಗಭದ್ರಾ ಮಂಡಳಿಯಲ್ಲಿ ಕಳೆದ 6 ವರ್ಷಗಳಿಂದ ಅಧ್ಯಕ್ಷರು, ಕಾರ್ಯದರ್ಶಿ ಆಂಧ್ರ ಮೂಲದವರಿದ್ದಾರೆ. ನೀರು ಹಂಚಿಕೆ ವಿಷಯದಲ್ಲಿ ಇಲ್ಲಿ ತಾರತಮ್ಯವಾಗುತ್ತಿದೆ. ನೀರನ್ನು ಬಲದಂಡೆಗೆ ಬಳಸಿಕೊಂಡು ಎಡದಂಡೆಯ ಲೆಕ್ಕಕ್ಕೆ ಹಚ್ಚಿದ ಉದಾಹರಣೆ ಇವೆ. ಹೀಗಾಗಿ, ತುಂಗಭದ್ರಾ ಮಂಡಳಿಯಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ಈ ಮೂರು ರಾಜ್ಯಕ್ಕೆ ಸಂಬಂಧಪಡದವರನ್ನು ಅಧ್ಯಕ್ಷರು ಹಾಗೂ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ನವಲಿ ಜಲಾಶಯಕ್ಕೆ ಬೇಕಾದ ಅನುದಾನ, ಭೂಮಿ ಹಾಗೂ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕು ಜೊತೆಗೆ ತುಂಗಭದ್ರಾ ಎಡದಂಡೆ ನಾಲೆಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ABOUT THE AUTHOR

...view details