ಕರ್ನಾಟಕ

karnataka

ETV Bharat / state

ಕೊಪ್ಪಳ ಜಿಲ್ಲೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲು ಸಿದ್ಧತೆ - ಒಂದೇ ದಿನ ಗಣೇಶ ಪ್ರತಿಷ್ಠಾಪಿಸಿ ನೀಮಜ್ಜನ

ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಅದ್ಧೂರಿಯಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸುತ್ತಿದ್ದ ಗಣೇಶೋತ್ಸವ ಮಂಡಳಿಗಳು ಈ ಬಾರಿ ಕೆಲವೊಂದಿಷ್ಟು ಮಂಡಳಿಗಳು ಪರಂಪರೆ ಬಿಡಬಾರದು ಎಂಬ ಕಾರಣಕ್ಕೆ ಒಂದೇ ದಿನ ಗಣೇಶ ಪ್ರತಿಷ್ಠಾಪಿಸಿ ನಿಮಜ್ಜನ ಮಾಡಲು ತೀರ್ಮಾನಿಸಿವೆ.

Preparing for a simple Ganeshotsava celebration in Koppal district
ಕೊಪ್ಪಳ ಜಿಲ್ಲೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲು ಸಿದ್ಧತೆ

By

Published : Aug 21, 2020, 5:25 PM IST

ಕೊಪ್ಪಳ: ಕೊರೊನಾ ಸೋಂಕು ಭೀತಿ ಎಲ್ಲ ಆಚರಣೆಗಳಿಗೂ ಬ್ರೇಕ್ ಹಾಕಿದೆ‌. ಷರತ್ತುಗಳೊಂದಿಗೆ, ಮಾರ್ಗಸೂಚಿಯಂತೆ ಸರಳವಾಗಿ ಆಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಕೊಪ್ಪಳದಲ್ಲಿ ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅಷ್ಟೊಂದು ಉತ್ಸಾಹ ಕಂಡು ಬರುತ್ತಿಲ್ಲ.

ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಸ್ಥಳಗಳಲ್ಲಿ ಅದ್ಧೂರಿಯಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸುತ್ತಿದ್ದ ಗಣೇಶೋತ್ಸವ ಮಂಡಳಿಗಳು ಈ ಬಾರಿ ಕೆಲವೊಂದಿಷ್ಟು ಮಂಡಳಿಗಳು ಪರಂಪರೆ ಬಿಡಬಾರದು ಎಂಬ ಕಾರಣಕ್ಕೆ ಒಂದೇ ದಿನ ಗಣೇಶ ಪ್ರತಿಷ್ಠಾಪಿಸಿ ನಿಮಜ್ಜನ ಮಾಡಲು ತೀರ್ಮಾನಿಸಿವೆ. ಅಲ್ಲದೆ ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಸಾರವಾಗಿ ಸರಳವಾಗಿ ಆಗಿ ಕೆಲವೆಡೆ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸಜ್ಜು ಮಾಡಿಕೊಳ್ಳುತ್ತಿವೆ.

ನಾಳೆಯೇ ಗಣೇಶ ಪ್ರತಿಷ್ಠಾಪನೆ ಇರುವುದರಿಂದ ಇಂದು ಹಲವೆಡೆ ಗಣೇಶಮೂರ್ತಿ ಪ್ರತಿಷ್ಠಾಪಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತು. ಕೊಪ್ಪಳ ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪನೆಯಾಗುತ್ತಿದ್ದ ಗಣೇಶಗಳ ಪೈಕಿ ಕೆಲವೊಂದಿಷ್ಟು ಜನರ ಆಕರ್ಷಣೆಯಾಗುತ್ತಿದ್ದವು. ವಿಭಿನ್ನ ರೀತಿಯ ಸೆಟ್ ಗಳನ್ನು ಹಾಕಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಗಮನ ಸೆಳೆಯುವ ಸೆಟ್ ಗಳನ್ನು ಹಾಕುತ್ತಿದ್ದ ಗಣೇಶ ಮಿತ್ರ ಮಂಡಗಳಿ ಈ ಬಾರಿ ಸಿಂಪಲ್ ಆಗಿ ಆಚರಣೆಗೆ ಮುಂದಾಗಿವೆ.

ಕೊಪ್ಪಳದ ಗಡಿಯಾರ‌ ಕಂಬದ ಬಳಿ ದುರ್ಗಾದೇವಿ ಮಿತ್ರ ಮಂಡಳಿ ಪ್ರತಿ ವರ್ಷ ಒಂದೊಂದು ರೀತಿಯ ಅದ್ಧೂರಿ ಸೆಟ್ ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಿತ್ತು. ಆದರೆ ಈ ಬಾರಿ ಗಡಿಯಾರ ಕಂಬದ ಬಳಿ ಇಂತಹ ಯಾವುದೇ ರೀತಿಯ ತಯಾರಿ ಮಾಡಿಲ್ಲ. ಇನ್ನು ಜವಾಹರ ರಸ್ತೆಯಲ್ಲಿ ಮೇದಾರ ಯುವಕ ಸಂಘದ ವತಿಯಿಂದಲೂ ಪ್ರತಿವರ್ಷ ಒಂದೊಂದು ಸೆಟ್ ಹಾಕಿ ಗಣೇಶಮೂರ್ತಿ ಪ್ರತಿಷ್ಢಾಪಿಸಲಾಗುತ್ತು. ಈ ವರ್ಷ ಸಿಂಪಲ್ ಆಗಿ ಗಣೇಶೋತ್ಸವ ಆಚರಣೆಗೆ ಸಿದ್ದತೆ ಮಾಡಿಕೊಂಡಿದೆ.

ಇದರ ಜೊತೆಗೆ ಹಿಂದು ಮಹಾಮಂಡಳ, ಕೋಟೆ ಪ್ರದೇಶ, ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗುತ್ತಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಒಂದೇ ದಿನ ಗಣೇಶ ಪ್ರತಿಷ್ಠಾಪಿಸಿ ನಿಮಜ್ಜನ ಮಾಡಲು ಹಲವು ಗಣೇಶ ಪ್ರತಿಷ್ಠಾಪನೆ ಮಂಡಳಿಗಳು ನಿರ್ಧರಿಸಿವೆ.

ABOUT THE AUTHOR

...view details