ಕರ್ನಾಟಕ

karnataka

ETV Bharat / state

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ತಯಾರಿ - ಕೊಪ್ಪಳ ಮಹಾರಥೋತ್ಸವ

ಜನವರಿ 30 ರಂದು ನಡೆಯುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಭರದ ಸಿದ್ಧತೆ ಜರುಗುತ್ತಿದ್ದು, ರಥೋತ್ಸವ ನಡೆಯುವ ಆವರಣನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.

Koppal Gavisiddheshwar Fair
ರಥ

By

Published : Jan 25, 2021, 1:46 PM IST

ಕೊಪ್ಪಳ:ಪ್ರಸಿದ್ಧ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಸರಳ ಜಾತ್ರೆಗೆ ಭರದ ಸಿದ್ಧತೆಗಳು ನಡೆದಿವೆ. ಇದೇ ಜನವರಿ 30 ರಂದು ಜನರನ್ನು ನಿರ್ಬಂಧಿಸಿ ಮಹಾರಥೋತ್ಸವ ಜರುಗಲಿದೆ.

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ತಯಾರಿ

ಜಾತ್ರೆಯ ಅಂಗವಾಗಿ ಹಮ್ಮಿಕೊಳ್ಳುತ್ತಿದ್ದ ಅನೇಕ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಪಡಿಸಲಾಗಿದ್ದು, ಜಾತ್ರೆಯನ್ನು ಸರಳವಾಗಿ ಆಚರಿಸಲು ಶ್ರೀಮಠದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಜಾತ್ರೆಗೆ ಲಕ್ಷಾಂತರ ಭಕ್ತರು ಪ್ರತಿವರ್ಷ ಸೇರುತ್ತಿದ್ದರು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಮೀರದೆ, ಸಂಪ್ರದಾಯ ಮುರಿಯದೆ ಈ ಬಾರಿ ಜಾತ್ರೆಯನ್ನು ಸರಳವಾಗಿ ಆಚರಿಸಲು ಶ್ರೀಮಠ ನಿರ್ಧರಿಸಿದೆ.

ಜನವರಿ 30 ರಂದು ಮಹಾರಥೋತ್ಸವ ಜನರ ನಿರ್ಬಂಧದೊಂದಿಗೆ ನಡೆಯಲಿದ್ದು, ರಥವನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಲಾಗುತ್ತಿದೆ. ರಥೋತ್ಸವ ನಡೆಯುವ ಆವರಣ, ಶ್ರೀಮಠದ ಆವರಣ ಸ್ವಚ್ಛಗೊಳಿಸಲಾಗಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಗಾಗಿ ಈ ಹಿಂದೆ ಮಹಾದಾಸೋಹ ಮಂಟಪವಿರುತ್ತಿದ್ದ ಸ್ಥಳದಲ್ಲಿ ಅಡುಗೆ ಮನೆ ಹಾಗೂ ಪ್ರಸಾದ ಸೇವನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೆಂಡಾಲ್ ಹಾಕಿ ಸಜ್ಜುಗೊಳಿಸಲಾಗಿದೆ. ಸರಳ ಜಾತ್ರೆಯ ಆಚರಣೆಗೆ ಶ್ರೀಮಠದ ಆವರಣದಲ್ಲಿ ಭರ್ಜರಿ ತಯಾರಿ ನಡೆದಿದೆ.

ABOUT THE AUTHOR

...view details