ಕೊಪ್ಪಳ: ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ, ನಗರದ ಕುಷ್ಟಗಿ ರಸ್ತೆಯಲ್ಲಿ ನಡೆದಿದೆ. ಮೃತಳನ್ನು ತಾಲೂಕಿನ ಚಿಲಕಮುಖಿ ಗ್ರಾಮದ ಹನುಮವ್ವ ರಾಜಪ್ಪ ಹುಳ್ಳಿ (30) ಎಂದು ಗುರುತಿಸಲಾಗಿದೆ. ಮೃತಳು ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.
ಕೊಪ್ಪಳದಲ್ಲಿ ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಗರ್ಭಿಣಿ ಸಾವು - ಕೊಪ್ಪಳದಲ್ಲಿ ಗರ್ಭಿಣಿ ಸಾವು
ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮೃತಳು ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.

ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಗರ್ಭಿಣಿ ಸಾವು
ಚಲಿಸುತ್ತಿದ್ದ ಬೈಕ್ ಮೇಲಿಂದ ಬಿದ್ದು ಗರ್ಭಿಣಿ ಸಾವು
ಚಿಕಿತ್ಸೆಗಾಗಿ ಚಿಲಕಮುಖಿಯಿಂದ ಬೈಕ್ನಲ್ಲಿ ಮಹಿಳೆಯನ್ನು ಕೊಪ್ಪಳಕ್ಕೆ ಕರೆದುಕೊಂಡು ಬರಲಾಗುತ್ತಿತ್ತು. ಕೊಪ್ಪಳ ನಗರ ಸಮೀಪಿಸುತ್ತಿದ್ದಂತೆ ತಲೆ ಸುತ್ತು ಬಂದು ಮಹಿಳೆ ಚಲಿಸುತ್ತಿದ್ದ ಬೈಕ್ನಿಂದ ಬಿದ್ದಿದ್ದಾಳೆ. ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದ್ದರಿಂದ ಹನುಮವ್ವ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.
ಈ ಕುರಿತು ಕೊಪ್ಪಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.