ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ 2ನೇ ಡೋಸ್‌ ಪಡೆಯುವವರಿಗೆ ಮಾತ್ರ ಆದ್ಯತೆ - ಕೊರೊನಾ ಎರಡನೇ ಅಲೆ

ಕೊಪ್ಪಳ ಜಿಲ್ಲೆಯಲ್ಲಿ ಸದ್ಯ 3,830 ಡೋಸ್ ಕೋವ್ಯಾಕ್ಸಿನ್, 6,480 ಡೋಸ್ ಕೋವಿಶಿಲ್ಡ್ ಹಾಗು 18 ವರ್ಷ ಮೇಲ್ಪಟ್ಟವರಿಗೆ ನೀಡಲು 3,390 ಡೋಸ್ ಕೋವಿಶಿಲ್ಡ್ ಸೇರಿ ಒಟ್ಟು 13,700 ಡೋಸ್ ಲಸಿಕೆ ಸಂಗ್ರಹವಿದೆ.

koppal
ಕೊಪ್ಪಳದಲ್ಲಿ 2ನೇ ಡೋಸ್‌ ವ್ಯಾಕ್ಸಿನ್ ಪಡೆಯುವವರಿಗೆ ಮಾತ್ರ ಆದ್ಯತೆ

By

Published : May 13, 2021, 12:59 PM IST

ಕೊಪ್ಪಳ: ಜಿಲ್ಲೆಯಲ್ಲಿಯೂ ಸಹ ಎರಡನೇ ಡೋಸ್ ಲಸಿಕೆ ಪಡೆಯುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದ್ದು, ಮೊದಲ ಡೋಸ್ ಪಡೆಯಲು ಬಂದವರನ್ನು ವಾಪಸ್ ಕಳುಹಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಲಸಿಕೆ ಹಾಕುವ ಕಾರ್ಯ ಮುಂದುವರಿದ್ದು, ಮೊದಲು ಡೋಸ್ ಪಡೆಯುವವರು ಸ್ವಲ್ಪ ದಿನ ಕಾಯಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1.78 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. 42 ಸಾವಿರ ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

ಸದ್ಯ ಜಿಲ್ಲೆಯಲ್ಲಿ 3,830 ಡೋಸ್ ಕೋವ್ಯಾಕ್ಸಿನ್, 6,480 ಡೋಸ್ ಕೋವಿಶೀಲ್ಡ್ ಹಾಗು 18 ವರ್ಷ ಮೇಲ್ಪಟ್ಟವರಿಗೆ ನೀಡಲು 3,390 ಡೋಸ್ ಕೋವಿಶೀಲ್ಡ್ ಸೇರಿ ಒಟ್ಟು 13,700 ಡೋಸ್ ಲಸಿಕೆ ಸಂಗ್ರಹವಿದೆ.

ಇದನ್ನೂ ಓದಿ:ಆಕ್ಸಿಜನ್‌ ಕೊರತೆ ಚಾಮರಾಜನಗರ ದುರಂತಕ್ಕೆ ಕಾರಣ; ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್​ಚಿಟ್​

ABOUT THE AUTHOR

...view details