ಕುಷ್ಟಗಿ (ಕೊಪ್ಪಳ):ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ಗೌಡ ಪಾಟೀಲರಿಗೆ ಗೆಲುವು ನಿಶ್ಚಿತ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಕುಷ್ಟಗಿ ಮಾರ್ಗವಾಗಿ ಮಸ್ಕಿ ಉಪಚುನಾವಣೆ ಪ್ರಚಾರ ಕಾರ್ಯಕ್ಕೆ ತೆರಳುವ ಮಾರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ಅಲೆ ಇರಬಹುದು. ಚುನಾವಣೆ ಹೊತ್ತಿಗೆ ಕಡಿಮೆಯಾಗಲಿದ್ದು, ಬಿಜೆಪಿ ನಿರೀಕ್ಷಿತ ಜಯ ಸಾಧಿಸಲಿದೆ ಎಂದರು.