ಕೊಪ್ಪಳ: ಇಂದು ಅಮವಾಸ್ಯೆ ಹಿನ್ನೆಲೆ, ಕೊಪ್ಪಳದ ಶ್ರೀ ಗವಿಮಠಕ್ಕೆ ಬರುವ ಭಕ್ತರಿಗಾಗಿ ಬೃಹತ್ ಕೊಪ್ಪರಿಕೆಗಳಲ್ಲಿ ಮಹಾದಾಸೋಹ ಸಿದ್ಧಪಡಿಸಲಾಗಿದೆ.
ಕೊಪ್ಪಳದ ಗವಿಮಠಕ್ಕೆ ಬರುವ ಭಕ್ತರಿಗಾಗಿ ಮಹಾದಾಸೋಹ ಸಿದ್ಧ ಕೊರೊನಾ ಉಲ್ಭಣ ಕಾರಣಕ್ಕಾಗಿ ಈ ಬಾರಿ ಸರಳವಾಗಿ ಜಾತ್ರೆ ನಡೆಸಿದ ಹಿನ್ನೆಲೆ, ಎರಡು ದಿನ ಮಾತ್ರ ಮಹಾದಾಸೋಹದ ಮೂಲಕ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿತ್ತು. ಜಾತ್ರೆಯ ಸಂದರ್ಭದಲ್ಲಿ 15 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ಪ್ರಸಾದ ಬಡಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಎರಡು ದಿನ ಮಾತ್ರ ಮಹಾದಾಸೋಹವಿತ್ತು.
ಇದನ್ನೂ ಓದಿ:ಡಿಕೆಶಿ ಭೇಟಿ ಮಾಡಿದ ವಿವಿಧ ಸಂಘಟನೆಗಳ ಮುಖಂಡರು - ಕಾರಣ?
ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಗವಿಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗಾಗಿ ಭಕ್ತರಿಗಾಗಿ ಬಡಿಸಲು ಮಧ್ಯರಾತ್ರಿಯಿಂದಲೇ ಮಹಾಪ್ರಸಾದ ಸಿದ್ಧಪಡಿಸಲಾಗಿದೆ. 40 ಕ್ವಿಂಟಾಲ್ ಅಕ್ಕಿಯ ಅನ್ನ, ದೊಡ್ಡ ದೊಡ್ಡ ಕೊಪ್ಪರಿಕೆಗಳಲ್ಲಿ ಪಲ್ಯ, ಸಾರು, ಗೋದಿ ಹುಗ್ಗಿ ಮಾಡಿಡಲಾಗಿದೆ..
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ