ಕರ್ನಾಟಕ

karnataka

ETV Bharat / state

ಗ್ರಹಣ, ಅಮಾವಾಸ್ಯೆಗೆ ಸಡ್ಡು... ಪ್ರಾಣೇಶ ನೇತೃತ್ವದಲ್ಲಿ ಮಸಣದಲ್ಲಿ ವನಮಹೋತ್ಸವ - ಕೊಪ್ಪಳ ಜಿಲ್ಲೆಯ ಗಂಗಾವತಿ

ನಮ್ಮ ಸಂಪ್ರದಾಯ, ಆಚರಣೆ ಎಲ್ಲವೂ ಮನೆಯ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ ಹೊರಗೆ ಬಂದಾಗ ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದು ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್​ ಹೇಳಿದ್ದಾರೆ.

sdsd
ಗ್ರಹಣ, ಅಮಾವಾಸ್ಯೆಗೆ ಸೆಡ್ಡು ಹೊಡೆದು ಮಸಣದಲ್ಲಿ ವನಮಹೋತ್ಸವ

By

Published : Jun 21, 2020, 3:58 PM IST

ಗಂಗಾವತಿ: ಗ್ರಹಣ, ಅಮವಾಸ್ಯೆಯಂತ ಸಂಪ್ರದಾಯಕ್ಕೆ ಸಡ್ಡು ಹೊಡೆದ ಕೆಲ ಪ್ರಗತಿಪರ ಚಿಂತಕರು ಆಯೋಜಿಸಿದ್ದ ಮಸಣದಲ್ಲಿ ವನಮಹೋತ್ಸವಕ್ಕೆ ಹಾಸ್ಯ ಸಾಹಿತಿ ಬಿ ಪ್ರಾಣೇಶ್​ ರುದ್ರಭೂಮಿಯಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ್ರು.

ಮೌಢ್ಯತೆಗೆ ಸಡ್ಡು: ಹಾಸ್ಯ ಸಾಹಿತಿ ಪ್ರಾಣೇಶ ನೇತೃತ್ವದಲ್ಲಿ ಮಸಣದಲ್ಲಿ ವನಮಹೋತ್ಸವ ಆಚರಣೆ

ನಮ್ಮೂರು ನಮ್ಮ ಹಳ್ಳ ಸಂಘಟನೆಯ ಸಂಚಾಲಕ ಡಾ. ಶಿವಕುಮಾರ ಮಾಲಿಪಾಟೀಲ್ ನೇತೃತ್ವದಲ್ಲಿ ಇತರರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಣೇಶ್​, ನಮ್ಮ ಸಂಪ್ರದಾಯ, ಆಚರಣೆ ಎಲ್ಲವೂ ಮನೆಯ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ ಹೊರಗೆ ಬಂದಾಗ ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದರು.

ಇಂದು ಗ್ರಹಣ ಅದರಲ್ಲೂ ಅಮಾವಾಸ್ಯೆ. ಹೀಗಿದ್ದೂ ಸ್ನೇಹಿತರ ಕರೆಗೆ ಓಗೊಟ್ಟು ಬಂದು ಮೌಢ್ಯ ವಿರೋಧಿಸುವ ಸಂದೇಶಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ. ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವನೆ ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದು ಪ್ರಾಣೇಶ್​ ಕರೆ ನೀಡಿದರು.

ABOUT THE AUTHOR

...view details