ಕರ್ನಾಟಕ

karnataka

ಬಿಜೆಪಿಯಿಂದ ಸಮುದಾಯಗಳನ್ನು ಹತ್ತಿಕ್ಕುವ ಕೆಲಸ: ಪ್ರಣವಾನಂದ ಸ್ವಾಮೀಜಿ ಆರೋಪ

By

Published : Dec 10, 2022, 7:55 PM IST

Updated : Dec 10, 2022, 8:58 PM IST

ಸಂವಿಧಾನಿಕವಾಗಿ ನಮಗೆ ಸಿಗಬೇಕಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯುತ್ತೇವೆ. ಸರ್ಕಾರಕ್ಕೆ ಬೆಳಗಾವಿ ಅಧೀವೇಶನವೇ ಅಂತಿಮ ಕಾಲಾವಧಿ ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Pranavananda Swamiji
ಪ್ರಣವಾನಂದ ಸ್ವಾಮೀಜಿ

ಸರ್ಕಾರದ ವಿರುದ್ಧ ಪ್ರಣವಾನಂದ ಸ್ವಾಮೀಜಿ ಆರೋಪ

ಗಂಗಾವತಿ(ಕೊಪ್ಪಳ):ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯಗಳ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಈಡಿಗ ಸಮಾಜದ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ತ ಕುಲಕಸುಬಿನಿಂದ ವಂಚಿತರಾಗಿರುವ ನಾವು ಇತ್ತ ಮೀಸಲಾತಿಯಿಂದಲೂ ಕೂಡ ವಂಚಿತರಾಗುತ್ತಿದ್ದೇವೆ. ಸರ್ಕಾದಿಂದ ಸಿಗಬೇಕಿದ್ದ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದೇವೆ. ಸಾಂವಿಧಾನಿಕವಾಗಿ ನಮಗೆ ಸಿಗಬೇಕಿರುವ ಹಕ್ಕುಗಳನ್ನು ಪಡೆದುಕೊಳ್ಳಲು ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯುತ್ತೇವೆ. ಸರ್ಕಾರಕ್ಕೆ ಬೆಳಗಾವಿಯಲ್ಲಿ ನಡೆಯುವ ಅಧೀವೇಶನವೇ ನಾವು ನೀಡುವ ಅಂತಿಮ ಕಾಲಾವಧಿ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆಯುವ ಆರು ರಾಜ್ಯಗಳ ಈಡಿಗ ಸಮಾಜದ ಸಮಾವೇಶದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ರಾಜ್ಯದಲ್ಲಿ 650 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ:2ಎ ಮೀಸಲಾತಿ ಡೆಡ್‌ಲೈನ್ ತಪ್ಪಿದರೆ ಸುವರ್ಣಸೌಧಕ್ಕೆ ಮುತ್ತಿಗೆ: ಜಯಮೃತ್ಯುಂಜಯ ಶ್ರೀ

Last Updated : Dec 10, 2022, 8:58 PM IST

ABOUT THE AUTHOR

...view details