ಕೊಪ್ಪಳ:ಕೋವಿಡ್-19ಸೋಂಕಿತರೊಬ್ಬರ ಮೃತದೇಹದ ಅಂತ್ಯಸಂಸ್ಕಾರದ ವೇಳೆ ಗ್ರಾಮ ಪಂಚಾಯತ್ ಸಿಬ್ಬಂದಿ ಫೋಟೋಗೆ ಪೋಸ್ ಕೊಡುತ್ತಿದ್ದರು. ಇದೇ ವೇಳೆ ಇನ್ನೊಂದೆಡೆ ಪಿಪಿಇ ಕಿಟ್ ಧರಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗು ಮತ್ತಿತರ ಸಿಬ್ಬಂದಿ ಫೋಟೋಗೆ ಪೋಸ್ ನೀಡುತ್ತಿದ್ದರು. ಘಟನೆಗೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಿಪಿಇ ಕಿಟ್ ಧರಿಸಿ PDO ಫೋಸ್ ಕೊಡ್ತಿದ್ರೆ ಅತ್ತ ಸುರಕ್ಷತೆ ಇಲ್ಲದೆ ಇಬ್ಬರಿಂದ ಸೋಂಕಿತನ ಅಂತ್ಯಕ್ರಿಯೆ
ಒಂದೆಡೆ ಪಿಪಿಇ ಕಿಟ್ ಹಾಕಿಕೊಂಡು ಪಿಡಿಒ ಸೇರಿದಂತೆ ಇತರೆ ಸಿಬ್ಬಂದಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೊಂದೆಡೆ ಕೋವಿಡ್‌ಗೆ ಸಂಬಂಧಿಸಿದಂತೆ ಯಾವುದೇ ಸುರಕ್ಷತಾ ಸಾಮಗ್ರಿಗಳಿಲ್ಲದೆ ಇಬ್ಬರು ಕಾರ್ಮಿಕರು ಸೋಂಕಿತನ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಈ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದ್ದು ಫೋಟೋ ದೊರೆತಿದೆ.
ಪಿಪಿಇ ಕಿಟ್ ಹಾಕಿಕೊಂಡು ಅಧಿಕಾರಿಗಳು ಪೋಸ್
ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕೆ.ಪ್ರಸಾದ್ ಎಂಬುವವರು ಕೊರೊನಾ ಸೋಂಕಿಗೆ ಪ್ರಾಣ ಕಳೆದುಕೊಂಡಿದ್ದರು. ಅವರ ಮೃತದೇಹದ ಅಂತ್ಯಸಂಸ್ಕಾರದ ವೇಳೆ ಗ್ರಾಮ ಗ್ರಾ.ಪಂ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದು, ಸ್ಥಳೀಯರಿಬ್ಬರು ಯಾವುದೇ ಸುರಕ್ಷತಾ ಪರಿಕರ ನೀಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
TAGGED:
PPE kit pose allegation,