ಗಂಗಾವತಿ: ಕೊರೊನಾ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಯ ಆರೋಗ್ಯ ರಕ್ಷಣೆಯ ಉದ್ದೇಶಕ್ಕೆ ನಗರಸಭೆಯಿಂದ ಡಿಜಿಟಲ್ ಥರ್ಮಾಮೀಟರ್ ಮತ್ತು ವೈಯಕ್ತಿಕ ರಕ್ಷಣಾ ಕಿಟ್‌ಗಳನ್ನು ಖರೀದಿಸಲಾಗಿದೆ.
ಗಂಗಾವತಿ: ನಗರಸಭೆ ಸಿಬ್ಬಂದಿಗೂ ಪಿಪಿಇ ಕಿಟ್ ವಿತರಣೆಗೆ ಸಿದ್ಧತೆ - Gangavti corona news
ನಗರಸಭೆಯ ನಿಗದಿತ ಅನುದಾನದಲ್ಲಿ ತಲಾ ಹದಿನೈದು ಸಾವಿರ ರೂಪಾಯಿ ಮೌಲ್ಯದ ಒಟ್ಟು 25 ಪಿಪಿಇ ಕಿಟ್ ಹಾಗೂ 10 ಡಿಜಿಟಲ್ ಮೀಟರ್ ಖರೀದಿಸಲಾಗಿದೆ.
ವೈದ್ಯ ಸಿಬ್ಬಂದಿಗೆ ಸೀಮಿತವಾಗಿದ್ದ ಪಿಪಿ ಕಿಟ್ ಈಗ ನಗರಸಭೆ ಸಿಬ್ಬಂದಿಗೂ..
ನಗರಸಭೆಯ ನಿಗಧಿತ ಅನುದಾನದಲ್ಲಿ ಸಿಬ್ಬಂದಿಗಳ ಆರೋಗ್ಯ ರಕ್ಷಣೆಯ ಉದ್ದೇಶಕ್ಕೆ ಸರ್ಕಾರ ವಿಶೇಷ ಆಸಕ್ತಿವಹಿಸಿ ಸಾಮಗ್ರಿಗಳ ಖರೀದಿಗೆ ಸೂಚನೆ ನೀಡಿದೆ ಎಂದು ನಗರಸಭೆಯ ಪ್ರಭಾರಿ ಪೌರಾಯುಕ್ತ ಜೆ.ಸಿ.ಗಂಗಾಧರ ಹೇಳಿದರು.
ತಲಾ ಹದಿನೈದು ಸಾವಿರ ರೂಪಾಯಿ ಮೌಲ್ಯದ ಒಟ್ಟು 25 ಕಿಟ್ ಹಾಗೂ ಹತ್ತು ಡಿಜಿಟಲ್ ಮೀಟರ್ ಖರೀದಿಸಲಾಗಿದೆ. ಬುಧವಾರ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಇವುಗಳ ಡೆಮೋ ನೀಡಲಾಯಿತು. ಈ ಮೊದಲು ಕೇವಲ ಆರೋಗ್ಯ ಇಲಾಖೆಯ ವೈದ್ಯ ಸಿಬ್ಬಂದಿ ಮಾತ್ರ ಧರಿಸುತ್ತಿದ್ದ ಪಿಪಿಇ ಕಿಟ್‌ಗಳನ್ನೀಗ ಈಗ ನಗರಸಭೆಯ ಸಿಬ್ಬಂದಿಗೂ ಒದಗಿಸಲಾಗುತ್ತಿದೆ.