ಕೊಪ್ಪಳ :ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ತಿಂಗಳುಗಳೇ ಕಳೆದರೂ ಅಭಿಮಾನಿಗಳು ಅವರನ್ನು ಮತ್ತೆ ನೆನಪಿಸಿಕೊಂಡು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ದೇವರ ಸ್ಥಾನ ನೀಡಿ ಅಭಿಮಾನಿಗಳು ನಮಿಸುತ್ತಿದ್ದಾರೆ. ಹಾಗೇ ಇಲ್ಲೊಂದು ರಥದಲ್ಲಿ ಅಪ್ಪು ಭಾವಚಿತ್ರವಿರಿಸಿ ಅಭಿಮಾನಿಗಳು ರಥ ಎಳೆದಿದ್ದಾರೆ.
ಮಾಸದ ಅಪ್ಪು ನೆನಪು : ರಥದಲ್ಲಿ ವಿರಾಜಮಾನವಾದ 'ಪವರ್ ಸ್ಟಾರ್' ಭಾವಚಿತ್ರ - Power Star Puneeth Rajkumar Portrait on chariot
ಪ್ರತಿ ವರ್ಷ ಶ್ರೀಮಂಗಳೇಶ್ವರ ಜಾತ್ರೆಯ ಸಂದರ್ಭದಲ್ಲಿ ರಥೋತ್ಸವ ನಡೆಯುತ್ತದೆ. ಅಪ್ಪು ಮೃತರಾದರೂ ಅವರ ನೆನಪು ಮಾತ್ರ ಇನ್ನೂ ಕೂಡ ಜನಮಾನಸದಿಂದ ಮಾಸಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ..
ರಥದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭಾವಚಿತ್ರ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಿನ್ನೆ (ಶುಕ್ರವಾರ) ಸಂಜೆ ನಡೆದ ಶ್ರೀ ಮಂಗಳೇಶ್ವರ ದೇವರ ರಥೋತ್ಸವದ ರಥದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭಾವಚಿತ್ರವಿರಿಸಿ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ.
ಪ್ರತಿ ವರ್ಷ ಶ್ರೀಮಂಗಳೇಶ್ವರ ಜಾತ್ರೆಯ ಸಂದರ್ಭದಲ್ಲಿ ರಥೋತ್ಸವ ನಡೆಯುತ್ತದೆ. ಅಪ್ಪು ಮೃತರಾದರೂ ಅವರ ನೆನಪು ಮಾತ್ರ ಇನ್ನೂ ಕೂಡ ಜನಮಾನಸದಿಂದ ಮಾಸಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
Last Updated : Mar 12, 2022, 12:51 PM IST