ಕರ್ನಾಟಕ

karnataka

ETV Bharat / state

ಗಂಗಾವತಿ ನಗರಸಭೆ ಚುನಾವಣೆ...ಕೈ-ಕಮಲದ ನಡುವೆ ಗಲಾಟೆಯಾಗುವ ಸಾಧ್ಯತೆ - ಗಂಗಾವತಿ ನ್ಯೂಸ್​

ಗಂಗಾವತಿ ನಗರಸಭೆಗೆ ನಡೆಯುತ್ತಿರುವ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಭಾರಿ ಪ್ರಮಾಣದ ಗಲಭೆಯಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿಯನ್ನು ಆಂತರಿಕ ಭದ್ರತಾ ಸಿಬ್ಬಂದಿ ಕಲೆ ಹಾಕಿದ್ದಾರೆ.

Possibility of uproar between BJP and Congress in gangawati Municipal Election
ಗಂಗಾವತಿ ನಗರಸಭೆ ಚುನಾವಣೆ...ಕೈ-ಕಮಲದ ನಡುವೆ ಗಲಾಟೆಯಾಗುವ ಸಾಧ್ಯತೆ

By

Published : Oct 26, 2020, 3:37 PM IST

ಗಂಗಾವತಿ (ಕೊಪ್ಪಳ):ನವೆಂಬರ್​ 2ರಂದು ಗಂಗಾವತಿ ನಗರಸಭೆಗೆ ನಡೆಯುತ್ತಿರುವ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಭಾರಿ ಪ್ರಮಾಣದ ಗಲಭೆಯಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿಯನ್ನು ಪೊಲೀಸ್ ಇಲಾಖೆ ಕಲೆ ಹಾಕಿದೆ.

ಗಂಗಾವತಿ ನಗರಸಭೆ ಚುನಾವಣೆ...ಕೈ-ಕಮಲದ ನಡುವೆ ಗಲಾಟೆಯಾಗುವ ಸಾಧ್ಯತೆ

ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ (ಇಂಟಲಿಜೆನ್ಸ್) ವಿಭಾಗದ ಸಿಬ್ಬಂದಿ ಈಗಾಗಲೇ ಈ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಜೊತೆಗೆ ಭದ್ರತೆಗಾಗಿ 300ಕ್ಕೂ ಹೆಚ್ಚು ಸಿಬ್ಬಂದಿ ನೀಡುವಂತೆ ಶಹರ ಪೊಲೀಸರು ಜಿಲ್ಲಾ ಎಸ್​ಪಿ ಪತ್ರ ಬರೆದಿದ್ದಾರೆ. ನಗರಸಭೆಯ ಅಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ನಡೆಯುತ್ತಿರುವ ಗುದ್ದಾಟ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.

ಈ ಹಿನ್ನೆಲೆ ಎಲ್ಲಾ ಮಾಹಿತಿ ಕಲೆ ಹಾಕಿರುವ ಆಂತರಿಕ ಭದ್ರತಾ ಸಿಬ್ಬಂದಿ ಮಾಹಿತಿ ಆಧರಿಸಿರುವ ಶಹರ ಪೊಲೀಸರು, ಗಲಭೆಯಾಗುವ ಸಾಧ್ಯತೆಯ ಬಗ್ಗೆ ಮೇಧಿಕಾರಿಗಳಿಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details