ಕೊಪ್ಪಳ: ಕೊರೊನಾ ಸೋಂಕಿತರನ್ನು ನೋಡುವ ಜನರ ದೃಷ್ಟಿಕೋನ ಬದಲಾಗಬೇಕು ಎಂಬ ಕಥಾ ಹಂದರವುಳ್ಳ 'ಪಾಸಿಟಿವ್' ಹೆಸರಿನ ಕಿರುಚಿತ್ರವೊಂದು ತಯಾರಾಗಿದೆ.
ಕೊಪ್ಪಳ: ಕಿನ್ನಾಳ ಗ್ರಾಮದ ಯುವಕರಿಂದ 'ಪಾಸಿಟಿವ್' ಕಿರುಚಿತ್ರ ನಿರ್ಮಾಣ
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಯುವಕರು 'ಪಾಸಿಟಿವ್' ಹೆಸರಿನ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಯುವಕರು ಈ ಕಿರುಚಿತ್ರ ತಯಾರಿಸಿದ್ದು, ನಗರದ ಮೀಡಿಯಾ ಕ್ಲಬ್ನಲ್ಲಿ ಕಿರುಚಿತ್ರದ ತಂಡ ಸುದ್ದಿಗೋಷ್ಠಿ ನಡೆಸಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮಾಡಿತು. ಕಿನ್ನಾಳ ಗ್ರಾಮದ ನಾಗರಾಜ ಶೆಲ್ಲೇದ್ ನಟಿಸಿ ನಿರ್ದೇಶಿರುವ ಈ ಕಿರುಚಿತ್ರ 12 ನಿಮಿಷ ಇದೆ. ಕೊರೊನಾ ಸಂದರ್ಭದಲ್ಲಿ ಜನರು ಕೊರೊನಾ ಸೋಂಕಿತರನ್ನು ನೋಡುವ ರೀತಿ ಹೇಗಿದೆ? ಅದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತರನ್ನು ನೋಡುವ ಜನರ ದೃಷ್ಟಿಕೋನ ಬದಲಾಗಬೇಕು ಎಂಬ ಕಥಾ ಹಂದರವಿದೆ.
ಬೆಂಗಳೂರಿನಿಂದ ನಾವು ವಾಪಸ್ ಬಂದಾಗ ಜನರು ನಮ್ಮನ್ನು ಸಹ ಒಂದು ರೀತಿಯಲ್ಲಿ ನೋಡಿದ್ದರು. ಆ ಕೆಲ ಘಟನೆಗಳನ್ನು ಆಧರಿಸಿ ಕಥೆಯನ್ನು ಸಿದ್ಧಪಡಿಸಿ ಈ ಕಿರುಚಿತ್ರ ತಯಾರಿಸಲಾಗಿದೆ ಎಂದು ಕಿರುಚಿತ್ರದ ನಿರ್ದೇಶಕ ನಾಗರಾಜ ಶೆಲ್ಲೇದ್ ಮಾಹಿತಿ ನೀಡಿದರು. ಚಿತ್ರ ಸಾಹಿತಿ ಕಿನ್ನಾಳ್ ರಾಜ್, ಕಿರುಚಿತ್ರದ ಛಾಯಾಗ್ರಾಹಕ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.