ಕರ್ನಾಟಕ

karnataka

ETV Bharat / state

ಕೊರೊನಾ ಭಯದ ನಡುವೆಯೂ ಸಾಮಾಜಿಕ ಅಂತರ ಕಾಪಾಡದ ಕುಷ್ಟಗಿ ಜನರು - ಪಾಸಿಟಿವ್ ವರದಿ ಬಂದರೂ ದೂರವಾಗಿಲ್ಲ

ಕೋವಿಡ್ - 19 ವೈರಾಣು ಕುಷ್ಟಗಿ ತಾಲೂಕಿಗೆ ಪದಾರ್ಪಣೆ ಮಾಡಿದಾಗಿನಿಂದ ಜನರಲ್ಲಿ ಮೂಡಿದ ಆತಂಕ ಇನ್ನು ಮರೆಯಾಗಿಲ್ಲ.

positive report kustagi people's anxiety is not far away
ಪಾಸಿಟಿವ್ ವರದಿ ಬಂದರೂ ದೂರವಾಗಿಲ್ಲ ಕುಷ್ಟಗಿ ಜನರ ಆತಂಕ..!

By

Published : May 20, 2020, 6:49 PM IST

Updated : May 20, 2020, 10:04 PM IST

ಕುಷ್ಟಗಿ:ಕೋವಿಡ್-19 ವೈರಾಣು ಕುಷ್ಟಗಿ ತಾಲೂಕಿಗೆ ಪದಾರ್ಪಣೆ ಮಾಡಿದಾಗಿನಿಂದ ಜನರಲ್ಲಿ ಮೂಡಿದ ಆತಂಕ ಇನ್ನೂ ಮರೆಯಾಗಿಲ್ಲ.

ಪಾಸಿಟೀವ್ ಪ್ರಯಾಣಿಕನೊಂದಿಗೆ ಚಾಲಕ, ನಿರ್ವಾಹಕ ಸೇರಿದಂತೆ 25 ಜನ ಬಸ್​​​​​​ನಲ್ಲಿದ್ದವರು ಹಾಗೂ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಕ್ವಾರಂಟೈನ್ ನಲ್ಲಿದ್ದ 65 ಜನ ಸೇರಿದಂತೆ 90 ಜನರ ಪ್ರಾಥಮಿಕ ಸಂಪರ್ಕಿತರ ವರದಿ ಬಾಕಿ ಇದೆ. ಇವರಲ್ಲಿ 9 ಜನ ಬಿಕ್ಷುಕರನ್ನು ಸಂಪರ್ಕಿಸಿದ 87 ಜನ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನಲ್ಲಿರುವಂತೆ ಸೂಚಿಸಲಾಗಿದೆ.

ಆದರೂ ಜನರಲ್ಲಿ ರೋಗದ ಬಗ್ಗೆ ಭೀತಿ ಇನ್ನು ದೂರವಾಗಿಲ್ಲ. ರೋಗಿ ಸಂಖ್ಯೆ ಪಿ.1173 ವ್ಯಕ್ತಿ ತಂದಿಟ್ಟ ಪಜೀತಿ ಇಷ್ಟಕ್ಕೆ ಮುಗಿಯದು ಎನ್ನುವಂತಾಗಿದೆ. ಭಿಕ್ಷುಕರ‌ ಮೂಲಕ ಕೊರೊನಾ ಸೋಂಕಿತರು, ಶಂಕಿತರ ಸಂಖ್ಯೆ ಸಮುದಾಯದ ಹಂತ ತಲುಪುತ್ತದಾ ಎಂಬ ಭಯಕ್ಕೆ ಕಾರಣವಾಗಿದೆ.

ಅಲ್ಲದೇ ಕೆಲವು ಕಡೆ ಸಾಮಾಜಿಕ ಅಂತರ ಉಲ್ಲಂಘಿಸುವುದು ಮಾಮೂಲಾಗಿದೆ. ಜನರು ಮಾಸ್ಕ್ ಹಾಕದೇ ಬೇಕಾಬಿಟ್ಟಿ ಹೊರಬರುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ.

Last Updated : May 20, 2020, 10:04 PM IST

ABOUT THE AUTHOR

...view details