ಕೊಪ್ಪಳ: ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಿರ್ಮಾಣ ಮಾಡಲಾಗಿದ್ದ ತಾಲೂಕಿನ ಬಹದ್ದೂರಬಂಡಿ ಗ್ರಾಮದ ನೂತನ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿದ್ದಾರೆ.
ನಾಲ್ಕೇ ತಿಂಗಳಿಗೆ ಕಿತ್ತು ಹೋದ ರಸ್ತೆ: ಕಳಪೆ ಕಾಮಗಾರಿಯೇ ಕಾರಣ ಎಂದು ಗ್ರಾಮಸ್ಥರ ಆರೋಪ - bahaddurbandi village of Koppal
ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಗ್ರಾಮದ ಹಳ್ಳದ ಬಳಿ ಇರುವ ರಸ್ತೆ ನಿನ್ನೆ ಸುರಿದ ಮಳೆಗೆ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿದ್ದಾರೆ.
ಬಹದ್ದೂರಬಂಡಿ ಗ್ರಾಮದ ಹಳ್ಳದ ಬಳಿ ಇರುವ ಈ ರಸ್ತೆ ನಿನ್ನೆ ಸುರಿದ ಮಳೆಗೆ ಕಿತ್ತು ಹೋಗಿದೆ. ಗುತ್ತಿಗೆದಾರರು ಸಂಪೂರ್ಣವಾಗಿ ಕಳಪೆ ಕಾಮಗಾರಿ ಮಾಡಿದ್ದರಿಂದ ರಸ್ತೆ ಕಿತ್ತುಹೋಗಿದ್ದು, ಇಲ್ಲಿ ಓಡಾಡೋಕ್ಕೆ ತುಂಬಾ ಅಪಾಯ ಎನಿಸುತ್ತಿದೆ. ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ರಸ್ತೆಯ ಟಾರು ಕಿತ್ತು ಹೋಗಿದೆ ಎಂದರೆ ಆ ಕಾಮಗಾರಿಯ ಗುಣಮಟ್ಟ ಹೇಗಿದೆ ಎಂದು ತಿಳಿಯುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಬಳಿ ಇರುವ ಹಳ್ಳಕ್ಕೆ ಸೇತುವೆಯನ್ನು ನಿರ್ಮಾಣ ಮಾಡಬೇಕು. ಮಳೆ ಬಂದಾಗ ಇಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಇದೇ ಹಳ್ಳದಲ್ಲಿ ಈ ಹಿಂದೆ ಗ್ರಾಮದ ಮೂರ್ನಾಲ್ಕು ಜನರು ನೀರಿನ ರಭಸಕ್ಕೆ ಕೊಚ್ಚಿಹೋಗಿರುವ ಉದಾಹರಣೆ ಇದೆ. ಹೀಗಾಗಿ, ಮೊದಲು ಕಿತ್ತು ಹೋಗಿರುವ ರಸ್ತೆಯನ್ನು ರಿಪೇರಿ ಮಾಡಿಸುವುದರ ಜೊತೆಗೆ, ಗ್ರಾಮದ ಮುಂದೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.