ಕೊಪ್ಪಳ:ಯಲಬುರ್ಗಾ ಪಟ್ಟಣದ ಅಂಗನವಾಡಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಿರುವ ಆರೋಪ ಕೇಳಿ ಬಂದಿದೆ.
ಯಲಬುರ್ಗಾ ಅಂಗನವಾಡಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ: ಸ್ಥಳೀಯರ ಆರೋಪ - ಅಂಗನವಾಡಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ
ಯಲಬುರ್ಗಾ ಅಂಗನವಾಡಿಯಲ್ಲಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಂಗನವಾಡಿಯಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ: ಸ್ಥಳೀಯರ ಆರೋಪ
ಜಿಲ್ಲೆಯ ಯಲಬುರ್ಗಾ ಪಟ್ಟಣದ ವಾರ್ಡ್ ನಂಬರ್ 4ರಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಳಪೆ ಅಹಾರ ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪೂರೈಸಲಾಗಿರುವ ಆಹಾರದ ಪ್ಯಾಕೆಟ್ಗೆ ನಿರ್ದಿಷ್ಟ ದಿನಾಂಕ ಮತ್ತು ಸರ್ಕಾರಿ ಮುದ್ರಣವಿಲ್ಲ. ಇಂತಹ ಅಹಾರವನ್ನು ವಿತರಣೆ ಮಾಡಬೇಡಿ ಎಂದು ವೈದ್ಯರು ಹೇಳಿದರೂ ಅಂಗನವಾಡಿ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಂತಹ ಕಳಪೆ ಮಟ್ಟದ ಆಹಾರ ತಿಂದು ಮಕ್ಕಳ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.