ಕೊಪ್ಪಳ :ರೈತರಿಗೆ ಕಳಪೆ ಮತ್ತು ಅವಧಿ ಮೀರಿದ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಿದ ಆರೋಪದ ಹಿನ್ನೆಲೆ ನಗರದ ಅಗ್ರೋ ಅಂಗಡಿಯೊಂದನ್ನು ಇಂದು ಸಂಜೆ ಸೀಲ್ ಮಾಡಲಾಯಿತು.
ಕಳಪೆ, ಅವಧಿ ಮೀರಿದ ಬೀಜ, ರಸಗೊಬ್ಬರ ಮಾರಾಟ ಆರೋಪ : ಅಗ್ರೋ ಅಂಗಡಿಗೆ ಸೀಲ್ - shanti Agro Sales Seal
ರೈತ ಸಂಘದ ಮುಖಂಡರು, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬಂದು ನಗರದ ಜವಾಹರ ರಸ್ತೆಯಲ್ಲಿರುವ ಶಾಂತಿ ಅಗ್ರೋ ಸೇಲ್ಸ್ ಹೆಸರಿನ ಅಂಗಡಿಯ ಪರಿಶೀಲನೆ ನಡೆಸಿ ಸೀಲ್..
ಕಳಪೆ, ಅವಧಿ ಮೀರಿದ ಬೀಜ, ರಸಗೊಬ್ಬರ ಮಾರಾಟ ಆರೋಪ: ಅಗ್ರೋ ಅಂಗಡಿ ಸೀಲ್
ರೈತ ಸಂಘದ ಮುಖಂಡರು, ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಬಂದು ನಗರದ ಜವಾಹರ ರಸ್ತೆಯಲ್ಲಿರುವ ಶಾಂತಿ ಅಗ್ರೋ ಸೇಲ್ಸ್ ಹೆಸರಿನ ಅಂಗಡಿಯ ಪರಿಶೀಲನೆ ನಡೆಸಿ ಸೀಲ್ ಮಾಡಿದರು.
ರೈತರಿಗೆ ಕಳಪೆ ಗುಣಮಟ್ಟದ ಹಾಗೂ ಅವಧಿ ಮುಗಿದ ಬೀಜ ಹಾಗೂ ಕ್ರಿಮಿನಾಶಕಗಳನ್ನು ಮಾರಾಟ ಮಾಡಿದ್ದಾರೆ. ಈ ಕುರಿತಂತೆ ನಮ್ಮಲ್ಲಿ ದಾಖಲೆಗಳಿವೆ ಎಂದು ರೈತ ಸಂಘದ ಮುಖಂಡರು ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳನ್ನು ಕರೆತಂದು ಪರಿಶೀಲಿಸಿದಾಗ ಕಳಪೆ ಬೀಜ, ಕ್ರಿಮಿನಾಶಕ ದೊರಕಿದ್ದು, ಅಂಗಡಿಯನ್ನು ಸೀಲ್ ಮಾಡಲಾಗಿದೆ.