ಗಂಗಾವತಿ (ಕೊಪ್ಪಳ):ಜಿಲ್ಲೆ ಕೊರೊನಾ ವಲಯದ ಗ್ರೀನ್ ಝೋನ್ನಲ್ಲಿದೆ ಎಂಬ ಕಾರಣಕ್ಕೆ ಜನ ಮುಕ್ತವಾಗಿ ಸಂಚರಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ವಾಹನ ಮತ್ತು ಜನ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಪ್ಯಾಟ್ರೋಲಿಂಗ್ ಮಾಡಿ ಅಲರ್ಟ್ ಆಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದರು.
ಗ್ರೀನ್ ಝೋನ್ ಅಂತಾ ಗ್ರಾಮೀಣ ಭಾಗದಲ್ಲಿ ಸಡಿಲಗೊಂಡ ಲಾಕ್ಡೌನ್: ಪೊಲೀಸರಿಂದ ಎಚ್ಚರಿಕೆ - ಪೊಲೀಸರಿಂದ ಎಚ್ಚರಿಕೆ
ಗ್ರಾಮೀಣ ಭಾಗದಲ್ಲಿ ವಾಹನ ಮತ್ತು ಜನ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿರುವಂತೆ ಜನರಿಗೆ ಎಚ್ಚರಿಕೆ ನೀಡಿದರು.
police
ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ಐ ಜೆ.ದೊಡ್ಡಪ್ಪ ನೇತೃತ್ವದಲ್ಲಿ ಗಸ್ತು ನಡೆಸುತ್ತಿರುವ ಪೊಲೀಸರು, ಕೆಲ ಗ್ರಾಮಗಳಲ್ಲಿ ಆರಂಭವಾಗಿದ್ದ ಅಂಗಡಿಗಳನ್ನು ಮುಚ್ಚಿಸಿದರು.
ಅನಾಗತ್ಯವಾಗಿ ಓಡಾಡುತ್ತಿದ್ದ ವಾಹನ ಸಂಚಾರಿಗಳನ್ನು ತಡೆದು ಎಚ್ಚರಿಕೆ ನೀಡಿದರು. ಬಸವಪಟ್ಟಣ, ಹೇರೂರು, ಕೇಸರಹಟ್ಟಿ, ವಡ್ಡರಹಟ್ಟಿ, ಜಂಗಮರ ಕಲ್ಗುಡಿ, ಶ್ರೀರಾಮನಗರ ಹಾಗೂ ಮರಳಿ ಮೊದಲಾದ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಲಾಕ್ಡೌನ್ ಉಲ್ಲಂಘಿಸಿದರೆ ಕಾನೂನು ಕ್ರಮಕ್ಕೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದರು.