ಗಂಗಾವತಿ: ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಆರೋಗ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಒಟ್ಟು 30ಕ್ಕೂ ಹೆಚ್ಚು ಜನರಿಗೆ ಎರಡನೇ ಅಲೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಫ್ರಂಟ್ಲೈನ್ ವಾರಿಯರ್ಸ್ಗೆ ಕೋವಿಡ್.. ಗಂಗಾವತಿಯಲ್ಲಿ ಪೊಲೀಸರು ಸೇರಿ 30 ಸಿಬ್ಬಂದಿಗೆ ಪಾಸಿಟಿವ್ - ಗಂಗಾವತಿಯಲ್ಲಿ ಪೊಲೀಸರಿಗೆ ಕೊರೊನಾ ಸೋಂಕು
ಗಂಗಾವತಿಯಲ್ಲಿ ಕೊರೊನಾ ವಾರಿಯರ್ಗಳಾದ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ. ಒಟ್ಟು 30 ಮಂದಿ ಫ್ರಂಟ್ಲೈನ್ ವಾರಿಯರ್ಸ್ಗೆ ಕೊರೊನಾ ದೃಢಪಟ್ಟಿದೆ.
corona
ಪೊಲೀಸ್ ಇಲಾಖೆಯಲ್ಲಿ ಒಬ್ಬರು ಸಿಪಿಐ, ಒಬ್ಬರು ಪಿಎಸ್ಐ ಸೇರಿದಂತೆ ಒಟ್ಟು 17, ನಗರಸಭೆಯಲ್ಲಿ ಏಳು ಹಾಗೂ ಆರೋಗ್ಯ ಇಲಾಖೆಯಲ್ಲಿನ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿನ ಒಟ್ಟು ಆರು ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಪೊಲೀಸ್ ಇಲಾಖೆಯಲ್ಲಿ ಗ್ರಾಮೀಣ ಸಿಪಿಐ, ಸಂಚಾರಿ ಪಿಎಸ್ಐ ಸೇರಿದಂತೆ ನಾನಾ ಠಾಣೆಯ 17 ಜನರಿಗೆ ಸೋಂಕು ದೃಢಪಟ್ಟಿದೆ. ನಗರಸಭೆ ಹಾಗೂ ಉಪ ವಿಭಾಗ ಆಸ್ಪತ್ರೆಯಲ್ಲಿನ 13 ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಬಹುತೇಕರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.