ಗಂಗಾವತಿ: ಗಣಿಗಾರಿಕೆ ಸಂದರ್ಭದಲ್ಲಿ ಜಿಲೆಟಿನ್ ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಇದೀಗ ತಾಲೂಕಿನ ಕ್ವಾರಿಗಳಿಗೆ ನೋಟಿಸ್ ನೀಡುತ್ತಿದೆ.
ತಾಲೂಕಿನ ವೆಂಕಟಗಿರಿ ಹೋಬಳಿ ಹಾಗೂ ಆನೆಗೊಂದಿ ಸುತ್ತಲೂ ಇರುವ ಕಲ್ಲು ಕ್ವಾರಿಗಳು, ಗಣಿ ಪ್ರದೇಶಗಳಲ್ಲಿ ತಲಾಶ್ ನಡೆಸುತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಂಬಂಧಿತ ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್ ನೀಡುತ್ತಿದ್ದಾರೆ.
ಗಣಿ ಕ್ವಾರಿಗಳ ಮಾಲೀಕರಿಗೆ ನೋಟಿಸ್ ನೀಡುತ್ತಿರುವ ಪೊಲೀಸ್ ಅಧಿಕಾರಿಗಳು ಓದಿ:ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆ
ಕ್ವಾರಿಗಳಲ್ಲಿ ಸಂಭವಿಸಿದ ಸ್ಫೋಟಕ್ಕೆ ಬಳಸುತ್ತಿರುವ ವಸ್ತುಗಳು ಏನು?, ಅವುಗಳ ಸುರಕ್ಷತೆಗೆ ಅನುಸರಿಸುತ್ತಿರುವ ಮಾನದಂಡಗಳು ಯಾವುವು? ಸಂಬಂಧಿತ ಇಲಾಖೆಗಳಿಂದ ಪರವಾನಗಿ ಪಡೆದುಕೊಳ್ಳಲಾಗಿದೆಯೇ? ಎಂಬ ಮೊದಲಾದ ಅಂಶಗಳ ಮಾಹಿತಿ ಕೋರಿ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡುತ್ತಿದೆ.