ಕರ್ನಾಟಕ

karnataka

ETV Bharat / state

ಜೂಜು ಅಡ್ಡೆ ಮೇಲೆ ದಾಳಿ: 10 ಜನರ ಬಂಧನ - Gambling latest news

ಕುಷ್ಟಗಿಯ ಬಿಲ್ಡಿಂಗ್ ವೊಂದರಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 69,090. ರೂ. ನಗದು ವಶಪಡಿಸಿಕೊಂಡಿದ್ದಾರೆ.

Police station
Police station

By

Published : Oct 15, 2020, 10:49 AM IST

ಕುಷ್ಟಗಿ/ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಪಕ್ಕದ ಬಸಯ್ಯ ಹಿರೇಮಠ ಬಿಲ್ಡಿಂಗ್‌ನಲ್ಲಿ ಜೂಜಾಟದಲ್ಲಿ ನಿರತರಾಗಿದ್ದ 10 ಜನರನ್ನು ಗಂಗಾವತಿ ಡಿವೈಎಸ್ ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಕುಷ್ಟಗಿ ಪೊಲೀಸರು ದಾಳಿ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಕುಮಾರ್ ದೊಡ್ಡಪ್ಪ ಗಾಣಗೇರ, ಶರಣಪ್ಪ ಹನಮಪ್ಪ ಕಟ್ಟಿಹೊಲ, ಮೀರಜ ಬುಡನಸಾಬ್ ಖಾಲಿಚೀಲ, ಮಂಜುನಾಥ ಮುದಕಪ್ಪ ಆಚಾರಿ, ಮುರ್ತುಜಾ ಮಹಿಬೂಬಸಾಬ್ ಬಂಗಾಳಿ, ಆನಂದಸಾ ಮೋತಿಲಾಲ್ ಸಾ ಸಿಂಗ್, ಹುಸೇನಸಾಬ್ ಭಾಷುಸಾಬ್ ಕಲಾಲಬಂಡಿ, ಹನುಮಂತಪ್ಪ ರಾಮಣ್ಣ ಕಟ್ಟಿ ಹೊಲ, ಯರೀಸ್ವಾಮಿ ರಮೇಶ ಚೂರಿ, ಯಮನಪ್ಪ ಮೇಘರಾಜ್ ಸಿಂಧನೂರು ಬಂಧಿತ ಆರೋಪಿಗಳು.

ರಾಷ್ಟ್ರೀಯ ಹೆದ್ದಾರಿ ಕ್ರಾಸ್‌ ನಲ್ಲಿರುವ ಬಿಲ್ಡಿಂಗ್‌ನಲ್ಲಿ ಜೂಜಾಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳ ಸಮೇತ 69,090. ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details