ಕುಷ್ಟಗಿ (ಕೊಪ್ಪಳ): ಪಟ್ಟಣದ ಗಜೇಂದ್ರಗಡ ರಸ್ತೆಯ ಆರ್.ಜೆ. ರೆಡಿಮೇಡ್ ಬಟ್ಟೆ ಅಂಗಡಿಯಿಂದ ಬಟ್ಟೆ ಹಾಗೂ 29,000 ರೂ. ನಗದು ಕದ್ದಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ.
ಜ.2 ರಂದು ಕುಷ್ಟಗಿ ಪಟ್ಟಣದ ವಿದ್ಯಾನಗರ ನಿವಾಸಿ ವಿನೋದ ಕುಮಾರ ಜಗದೀಶಯ್ಯ ಹಿರೇಮಠ ಅವರಿಗೆ ಸೇರಿದ ಆರ್.ಜೆ. ರೆಡಿಮೇಡ್ ಬಟ್ಟೆ ಅಂಗಡಿಯ ಬೀಗ ಮುರಿದು ಜೀನ್ಸ್, ಟೀ ಶರ್ಟ್ ಇನ್ನಿತರೆ ರೆಡಿಮೇಡ್ ಬಟ್ಟೆ ಸೇರಿದಂತೆ 29,000 ರೂ. ನಗದು ದೋಚಿದ್ದರು. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಜ. 4ರಂದು ಪ್ರಕರಣ ದಾಖಲಾಗಿತ್ತು.