ಕರ್ನಾಟಕ

karnataka

ETV Bharat / state

ಸಿನಿಮಾ ಸ್ಟೈಲಲ್ಲಿ ಚೇಸಿಂಗ್​.. ಗಂಗಾವತಿ ಬಳಿ ಗುಂಡು ಹಾರಿಸಿ ಡಕಾಯಿತರನ್ನು ಬಂಧಿಸಿದ ಖಾಕಿ - ಬೆಂಗಳೂರಿನ ಚಿಕ್ಕಜಾಲ ಪೊಲೀಸರಿಂದ ಫೈರಿಂಗ್​

ದರೋಡೆ ಮಾಡಿ ಪರಾರಿಯಾಗುತ್ತಿದ್ದ ಖದೀಮರು- ಬೆನ್ನಟ್ಟಿದ್ದ ಬೆಂಗಳೂರು ಪೊಲೀಸರು- ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧನ

police-arrested-five-accused-after-firing-in-gangavati
ಗಂಗಾವತಿ: ಡಕಾಯಿತರ ಮೇಲೆ ಗುಂಡು ಹಾರಿಸಿ ಬಂಧಿಸಿದ ಖಾಕಿ

By

Published : Jul 23, 2022, 11:16 AM IST

ಗಂಗಾವತಿ(ಕೊಪ್ಪಳ):ದರೋಡೆ, ಡಕಾಯಿತಿ ಪ್ರಕರಣದಲ್ಲಿ ಬೇಕಾಗಿದ್ದ ದರೋಡೆಕೋರರು ಪರಾರಿಯಾಗುತ್ತಿರುವ ವೇಳೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಪೊಲೀಸರು ಹಿಡಿದಿದ್ದಾರೆ. ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಿದ ಪ್ರಕರಣ ತಾಲೂಕಿನ ಮುಸ್ಟೂರು ಗ್ರಾಮದ ಬಳಿ ನಡೆದಿದೆ.

ಬೆಂಗಳೂರಿನ ಚಿಕ್ಕಜಾಲ ಠಾಣೆ ಪೊಲೀಸರು, ಆರೋಪಿಗಳು ಖಾಸಗಿ ವಾಹನದಲ್ಲಿ ಪರಾರಿಯಾಗುತ್ತಿರುವಾಗ ಬೆನ್ನಟ್ಟಿದ್ದಾರೆ. ಮುಸ್ಟೂರು ಬಳಿ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಡಕಾಯಿತರು ಪರಾರಿಗೆ ಯತ್ನಿಸಿದ್ದಲ್ಲದೇ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಪ್ರಕರಣದಲ್ಲಿ ಐವರು ಆರೋಪಿಗಳಲ್ಲಿ ಅಂಬಣ್ಣ, ಪರಶುರಾಮ, ಅಡವಿಯಪ್ಪ ಎಂಬುವರನ್ನು ಬಂಧಿಸಿದ್ದಾರೆ. ಇನ್ನುಳಿದ ಶಂಕರ್ ಹಾಗೂ ಅಶೋಕ್ ಎಂಬುವರ ಕಾಲಿಗೆ ಗುಂಡೇಟು ತಗುಲಿದ್ದು, ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಜಮೀನು ವಿಚಾರಕ್ಕೆ ಗುಂಪು ಘರ್ಷಣೆ: 6 ಬಾರಿ ಗುಂಡು ಹಾರಿಸಿದ ಬಿಜೆಪಿ ಮುಖಂಡ

ABOUT THE AUTHOR

...view details