ಕರ್ನಾಟಕ

karnataka

ETV Bharat / state

ವಿಶ್ವ ಪೌರ ಕಾರ್ಮಿಕರ ದಿನಾಚರಣೆ: ಕಂಡ ಕಂಡಲ್ಲಿ ಉಗಿಯುವವರು ಒಮ್ಮೆ ಯೋಚಿಸಿ - ಸಾಮಾಜಿಕ ಕಳಕಳಿ

ಗಂಗಾವತಿ ತಾಲೂಕಿನ ಪೌರ ಕಾರ್ಮಿಕ ಮಹಿಳೆವೋರ್ವರು ಸಾರ್ವಜನಿಕ ಸ್ಥಳಗಳಲ್ಲಿ ಜನರು ಉಗುಳಿರುವುದನ್ನು ಸ್ಚಚ್ಛಗೊಳಿಸುತ್ತಿದ್ದ ಫೋಟೊವೊಂದು ಈಗ ವಿಶ್ವ ಪೌರ ಕಾರ್ಮಿಕರ ದಿನದಂದು ಗಮನ ಸೆಳೆಯುತ್ತಿದೆ.

ಯುವ ವಕೀಲ ಮಂಜುನಾಥ ಹಾಕಿದ ಫೋಟೊ

By

Published : Sep 24, 2019, 11:51 AM IST

ಗಂಗಾವತಿ: ಪೌರ ನೌಕರರ ದಿನಾಚರಣೆ ಅಂಗವಾಗಿ ಯುವ ವಕೀಲ ಹೆಚ್.ಎಂ. ಮಂಜುನಾಥ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೊವನ್ನು ಹರಿಬಿಡುವ ಮೂಲಕ ಕಾರ್ಮಿಕರ ಕುರಿತು ಜಾಗೃತಿ ಮೂಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿರುವುದನ್ನು ಪೌರ ಕಾರ್ಮಿಕ ಮಹಿಳೆ ಸ್ವಚ್ಛಗೊಳಿಸುತ್ತಿರುವ ಈ ಫೋಟೊವನ್ನು ಫೇಸ್​ಬುಕ್​, ವಾಟ್ಸ್ಯಾಪ್​ ಮೂಲಕ ಪೋಸ್ಟ್ ಮಾಡಿದ್ದು, ಈಗ ಅದು ಸಖತ್ ಸದ್ದು ಮಾಡುತ್ತಿದೆ.

ಯುವ ವಕೀಲ ಮಂಜುನಾಥ ಹಾಕಿದ ಫೋಟೊ

ಸಾರ್ವಜನಿಕ ಸ್ಥಳಗಳ ಬಗ್ಗೆ ಸಾಮಾಜಿಕ ಕಳಕಳಿ ಹೊಂದಿರುವ ಈ ಫೋಟೊ, ಪೌರ ಕಾರ್ಮಿಕರ ಬಗೆಗೆ ಗೌರವ ಮೂಡುವಂತೆ ಮಾಡಿದೆ. ನಿತ್ಯವೂ ಸ್ವಚ್ಛಗೊಳಿಸುವ ಕಾಯಕದಲ್ಲಿರುವ ಪೌರ ನೌಕರರ ಬಗ್ಗೆ ಸ್ವಲ್ಪ ಕಾಳಜಿ ಇರಲಿ ಎಂಬುದು ಇಲ್ಲಿನ ಆಶಯವಾಗಿದೆ.

ಎಲೆ, ಅಡಿಕೆ, ತಂಬಾಕು, ಗುಟ್ಕಾ ಹೀಗೆ ಇನ್ನಿತರ ವಸ್ತುಗಳನ್ನು ತಿಂದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಲು ಈ ಜಾಗೃತಿ ಮೂಡಿಸಲಾಗಿದೆ.

ನಿಮ್ಮ ತಾಯಿಯಿಂದ ಈ ಕೆಲಸ ಮಾಡಿಸಲು ಇಷ್ಟಪಡದ ನೀವು, ಬೇರೆ ತಾಯಂದಿರು ಏಕೆ ನೀವು ಉಗುಳಿದ್ದನ್ನು ಒರೆಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿರುವ ಫೋಟೊ ಕೆಳಗೆ ವಕೀಲ ಮಂಜುನಾಥ್​ ಬರೆದಿದ್ದರು. ನೋಡುಗರಲ್ಲಿ ಇದು ತುಂಬ ಪರಿಣಾಮ ಸಹ ಬೀರುವಂತಿದೆ.

ABOUT THE AUTHOR

...view details