ಕರ್ನಾಟಕ

karnataka

ETV Bharat / state

ಕೊರೊನಾದಿಂದ ಮೃತಪಟ್ಟ ಬಿಜೆಪಿ ನಾಯಕನ ಅಂತ್ಯಕ್ರಿಯೆ ನಡೆಸಿದ ಪಿಎಫ್​ಐ ಕಾರ್ಯಕರ್ತರು! - Gangavati latest news

ಕೊರೊನಾದಿಂದ ಮೃತಪಟ್ಟಿದ್ದ ಬಿಜೆಪಿ ಹಿರಿಯ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ಕಾಮದೊಡ್ಡಿ ದೇವಪ್ಪ ಅವರ ಅಂತ್ಯಕ್ರಿಯೆಯನ್ನು ಪಿಎಫ್​ಐ ಕಾರ್ಯಕರ್ತರು ನಗರದ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ನೆರವೇರಿಸಿದರು.

Gangavati
Gangavati

By

Published : Aug 24, 2020, 7:08 PM IST

ಗಂಗಾವತಿ:ಕೊರೊನಾ ಸೋಂಕಿನಿಂದ ನಿನ್ನೆ ಮೃತಪಟ್ಟಿದ್ದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ಕಾಮದೊಡ್ಡಿ ದೇವಪ್ಪ ಅವರ ಅಂತ್ಯಕ್ರಿಯೆಯನ್ನು ತಡರಾತ್ರಿ ನಗರದ ಮಾದಿಗ ಸಮಾಜದ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

ಪಾಫ್ಯುಲರ್ ಫ್ರಂಟ್ ಆಫ್​ ಇಂಡಿಯಾ (ಪಿಎಫ್ಐ) ಸಂಘಟನೆಯ ಪದಾಧಿಕಾರಿಗಳು ಅಗಲಿದ ಬಿಜೆಪಿ ನಾಯಕನ ಅಂತ್ಯ ಸಂಸ್ಕಾರಕ್ಕೆ ಆರೋಗ್ಯ ಹಾಗೂ ನಗರಸಭೆ ಇಲಾಖೆಯೊಂದಿಗೆ ಕೈಜೋಡಿಸಿದರು.

ಈ ವೇಳೆ ಸಂಘಟನೆಯ ಪ್ರಮುಖರಾದ ಜಹೀರ್ ಅಬ್ಬಾಸ್, ಹಾಸೀನ್, ಹಫೀಜ್, ಆಲಂ ಅಬ್ದುಲ್, ಹಾಫೀಜ್ ರಿಜ್ವಾನ್, ಮದರ್ ನಿಸಾರ್, ಮೌಲಾ ಹುಸೇನ್ ಸೇರಿದಂತೆ ಇತರರು ಪಿಪಿಇ ಕಿಟ್ ಧರಿಸಿ ಮೃತನ ಅಂತ್ಯ ಸಂಸ್ಕಾರ ನೆರವೇರಿಸಿದರು.

ಕೊರೊನಾದಿಂದ ಜನ ಆತಂಕಗೊಂಡು ಸೋಂಕಿನಿಂದ ಸಾವನ್ನಪ್ಪಿದ್ದವರ ಅಂತ್ಯ ಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿದ್ದರು. ಈ ವೇಳೆ ಪಿಎಫ್ಐ ಸಂಘಟನೆಯ ಕಾರ್ಯಕರ್ತರು ಜಾತಿ, ಧರ್ಮ ಮತ್ತು ಪಕ್ಷ ಬೇಧ ಮರೆತು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details