ಗಂಗಾವತಿ:ಕೊರೊನಾದ ಬಗ್ಗೆ ಸಂಪೂರ್ಣ ಮುಂಜಾಗ್ರತೆ ವಹಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ನ್ಯಾಯಾಲಯ ಮಕ್ಕಳಿಗೆ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.
ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಪರೀಕ್ಷೆಗೆ ಅನುಮತಿ: ಕೊಪ್ಪಳದ ಡಿಡಿಪಿಐ - ಕೊಪ್ಪಳದ ಡಿಡಿಪಿಐ ಡಿ.ಬಿ. ನೀರಲಕೇರಿ
ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಲಾಗುವುದು, ಕೊರೊನಾದ ಬಗ್ಗೆ ಸಂಪೂರ್ಣ ಮುಂಜಾಗ್ರತೆ ವಹಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ನ್ಯಾಯಾಲಯ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ಶಿಕ್ಷಣ ಇಲಾಖೆಯ ಕೊಪ್ಪಳದ ಡಿಡಿಪಿಐ ಡಿ.ಬಿ. ನೀರಲಕೇರಿ ಹೇಳಿದರು.
ನಗರದಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಗುರು ಭವನದಲ್ಲಿ ನಡೆದ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು. ಒಂದು ಡೆಸ್ಕ್ ಮತ್ತೊಂದು ಡೆಸ್ಕ್ಗೆ ಮೂರು ಅಡಿ ಅಂತರ ಇರಲೇಬೇಕು. ಎಲ್ಲಿಯೂ ಸಾಮಾಜಿಕ ಅಂತರ ಉಲ್ಲಂಘನೆ ಆಗಬಾರದು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಸೇರಿದಂತೆ ಇನ್ನಿತರ ಕೊರೊನಾ ನಿಯಮವನ್ನು ಕರಾರುವಕ್ಕಾಗಿ ಅನುಷ್ಠಾನಕ್ಕೆ ತರುವ ಉದ್ದೇಶಕ್ಕೆ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
ಕಂಟೈನ್ಮೆಂಟ್ ವಲಯದಿಂದ ಬಂದ ಅಥವಾ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಪರೀಕ್ಷೆ ಬರೆಯಲು ಪ್ರತಿ ಕೇಂದ್ರದಲ್ಲಿ ಎರಡು ವಿಶೇಷ ಕೊಠಡಿ ವ್ಯವಸ್ಥೆ ಇರಬೇಕು. ಕಂಟೈನ್ಮೆಂಟ್ ಮಕ್ಕಳ ಕೊಠಡಿಯಲ್ಲಿನ ಡೆಸ್ಕ್ಗಳ ಅಂತರ ಕನಿಷ್ಟ ಆರು ಅಡಿ ಇರಬೇಕು ಎಂದು ಸಲಹೆ ನೀಡಿದರು.