ಕರ್ನಾಟಕ

karnataka

ETV Bharat / state

ಕೊರೊನಾ ಬಂದ ಮೇಲೆ ಜನರ ಲೈಫ್ ಸ್ಟೈಲೇ ಬದಲಾಗೈತಿ: ಸಂಸದ ಸಂಗಣ್ಣ ಕರಡಿ - People's Lifestyle Change on Corona Coming

ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್​ಅನ್ನು ಕುಷ್ಟಗಿ, ಯಲಬುರ್ಗಾ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಸಂ ಸದ ಸಂಗಣ್ಣ ಕರಡಿ ತಿಳಿಸಿದರು.

People's Lifestyle Change on Corona Coming
ಕೊರೊನಾ ಬಂದ ಮೇಲೆ ಜನರ ಲೈಫ್ ಸ್ಟೈಲ್ ಚೇಂಜ್ ಆಗೈತೀ : ಕರಡಿ ಸಂಗಣ್ಣ

By

Published : May 2, 2020, 9:37 PM IST

ಕುಷ್ಟಗಿ:ಕೊರೊನಾ ವೈರಸ್ ಬಂದ ಮೇಲೆ ದೇಶದ ಜನರ ಲೈಫ್​​ ಸ್ಟೈಲ್ ಬದಲಾಗಿದೆ. ಈ ಕೊರೊನಾದಿಂದ ದೇಶವ್ಯಾಪಿ ಒಂದು ದಿನ ಲಾಕ್​ಡೌನ್ ಕಷ್ಟ ಎನ್ನುತ್ತಿದ್ದವರು ಇದೀಗ 40 ದಿನಗಳ ಲಾಕ್​​ಡೌನ್​​ ಅವಧಿ ಕಳೆದಿದ್ದೇವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಲ ಜೀವನ ಮಿಷನ್ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಸದುದ್ದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ ಮಿಷನ್ ಕುಷ್ಟಗಿ, ಯಲಬುರ್ಗಾ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದರ್ಶಿತ್ವದ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗದಿರಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಿ ಅಶುದ್ಧ ನೀರು ಇರುತ್ತದೆ ಅಲ್ಲಿ ರೋಗ ರುಜಿನ ಹೆಚ್ಚು. ಹೀಗಾಗಿ ಶುದ್ಧ ನೀರಿನ ಬಳಕೆಯಿಂದ ಜನಸಾಮಾನ್ಯರು ರೋಗ ಮುಕ್ತವಾಗಿರಲು ಸಾಧ್ಯ ಎಂದರು.

ABOUT THE AUTHOR

...view details