ಕರ್ನಾಟಕ

karnataka

ETV Bharat / state

ನಾಗರ ಪಂಚಮಿ ಸಂಭ್ರಮದಲ್ಲಿ ಸಾಮಾಜಿಕ ಅಂತರ ಮರೆತ ಜನ - ಕುಷ್ಟಗಿ

ಕಳೆದ ಭಾನುವಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ತಬ್ಧವಾಗಿದ್ದ ಕುಷ್ಟಗಿ ಪಟ್ಟಣ ಸೋಮವಾರ ವಾರದ ಸಂತೆಯಾಗಿ ಬದಲಾಗಿತ್ತು. ಈಗ ಅಂಗಡಿ ಮುಂಗಟ್ಟುಗಳ ಮುಂದೆ ಜನ ಜಂಗುಳಿ ಕಂಡು ಬಂತು.

Nagar Panchami celebration
Nagar Panchami celebration

By

Published : Jul 21, 2020, 12:58 AM IST

ಕುಷ್ಟಗಿ (ಕೊಪ್ಪಳ):ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಹೀಗಿದ್ದರೂ ಜನರು ಕೊರೊನಾ ಭಯವಿಲ್ಲದೇ ನಾಗರ ಪಂಚಮಿ ಹಬ್ಬದ ದಿನಸಿ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಮುಗಿಬಿದ್ದಿರುವುದು ಸೋಮವಾರ ಕಂಡು ಬಂತು. ಕಳೆದ ಭಾನುವಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ತಬ್ಧವಾಗಿದ್ದ ಕುಷ್ಟಗಿ ಪಟ್ಟಣ ಸೋಮವಾರ ವಾರದ ಸಂತೆಯಾಗಿ ಬದಲಾಗಿತ್ತು. ಅಂಗಡಿ ಮುಂಗಟ್ಟುಗಳ ಮುಂದೆ ಜನ ಜಂಗುಳಿ ಕಂಡು ಬಂತು.

ನಾಗರ ಪಂಚಮಿ ಸಂಭ್ರಮದಲ್ಲಿ ಸಾಮಾಜಿಕ ಅಂತರ ಮರೆತ ಜನ

ಸಂತೆ ಮೈದಾನದಲ್ಲೂ ಕಾಯಿಪಲ್ಲೆ ಖರೀದಿ ಸೇರಿದಂತೆ ಒಣ ಕೊಬ್ಬರಿ (ಗಿಟಕ), ಬೆಲ್ಲ ಅಮವಾಸ್ಯೆ ದಿನವಾದವಾದರೂ ಕೂಡ ಖರೀದಿ ಪ್ರಕ್ರಿಯೆ ಜೋರಾಗಿತ್ತು. ಆದರೆ ಎಲ್ಲಿಯೂ ಸಾಮಾಜಿಕ ಅಂತರ ಕಂಡು ಬರಲಿಲ್ಲ. ಮುಖಕ್ಕೆ ಮಾಸ್ಕ್ ಕೆಲವರು ಧರಿಸಿದ್ದರೆ, ಕೆಲವರು ಕಾಟಾಚಾರಕ್ಕೆ ಧರಿಸಿರುವುದು ಕಂಡು ಬಂತು. ಸ್ಥಳೀಯ ಪುರಸಭೆ ಸಿಬ್ಬಂದಿ ಈ ಸಂಧರ್ಭ ಧ್ವನಿವರ್ಧಕದ ಮೂಲಕ ಕೊರೊನಾ ಜಾಗೃತಿ ಎಲ್ಲಿಯೂ ಕಂಡುಬರಲಿಲ್ಲ.

ABOUT THE AUTHOR

...view details