ಕರ್ನಾಟಕ

karnataka

ETV Bharat / state

ಬ್ಯಾರಿಕೇಡ್ ಸರಿಸಿ ಅನಗತ್ಯ ಸಂಚಾರ.. ಪೊಲೀಸರಿಗೆ ಮಂಡೆ ಬಿಸಿಯಾದ ಜನರ ಓಡಾಟ! - ಕುಷ್ಟಗಿ

ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಿದೆ. ದಿನವೂ ಸಾವು ನೋವಿನ ಪ್ರಕರಣಗಳು ವರದಿಯಾಗುತ್ತಿದ್ದರೂ ಜನರಲ್ಲಿ ಕೊರೊನಾ ಭಯ ಇಲ್ಲ.

Koppal
Koppal

By

Published : May 15, 2021, 9:06 PM IST

Updated : May 15, 2021, 11:00 PM IST

ಕುಷ್ಟಗಿ(ಕೊಪ್ಪಳ):ಕೊರೊನಾ ರೂಪಾಂತರ ವೈರಸ್ ದಿನ ಕಳೆದಂತೆ ಭಯದ ಸ್ವರೂಪ‌ ನಡುಕ‌ ಸೃಷ್ಟಿಸಿದೆ. ಈ 2ನೇ ಅಲೆ ನಿಯಂತ್ರಿಸುವ ಸಲುವಾಗಿ ಅನಗತ್ಯ ವಾಹನಗಳ ಓಡಾಟ ನಿಯಂತ್ರಿಸಲು ಬ್ಯಾರಿಕೇಡ್ ‌ಸೈಡ್​ಗೆ ಸರಿಸಿ ಸಂಚರಿಸುತ್ತಿರುವುದು ಪೊಲೀಸರಿಗೆ ಇಲ್ಲದ ತಲೆ ಬಿಸಿಗೆ ಕಾರಣವಾಗಿದೆ.

ಪೊಲೀಸರಿಗೆ ಮಂಡೆ ಬಿಸಿಯಾದ ಜನರ ಓಡಾಟ

ಕುಷ್ಟಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಿದೆ. ದಿನವೂ ಸಾವು ನೋವಿನ ಪ್ರಕರಣಗಳು ವರದಿಯಾಗುತ್ತಿದ್ದರೂ ಜನರಲ್ಲಿ ಕೊರೊನಾ ಭಯ ಇಲ್ಲ. ಕೊರೊನಾ ಭಯ ಕೇಳಲು, ಮಾತನಾಡುವುದಕ್ಕೆ ಸೀಮಿತವಾಗುತ್ತಿದ್ದು, ನಿಯಂತ್ರಿಸುವ ಮಾರ್ಗಸೂಚಿ ಕ್ರಮ ಪಾಲನೆಗಾಗಿ ಇಲ್ಲ. ಈ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ ಲಾಕ್​ಡೌನ್​ಗೆ ಅನಗತ್ಯ ಸಂಚಾರ ನಿರ್ಬಂಧಿಸಿದೆ.

ಪ್ರಮುಖ ವೃತ್ತಗಳಲ್ಲಿ ಪೊಲೀಸರು ಲಾಠಿ ಹಿಡಿದು ನಿಂತಿದ್ದು ಇವರಿಂದ ಲಾಠಿ ಏಟು, ದಂಡ, ವಾಹನ ಸೀಜ್​ನಿಂದ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗಕ್ಕೆ ಬ್ಯಾರಿಕೇಡ್ ಪಕ್ಕಕ್ಕೆ ಸರಿಸಿ ಸಂಚರಿಸುತ್ತಿದ್ದಾರೆ. ಒಂದೆಡೆ ಬಿಗಿ ಮಾಡಿದರೆ ಮತ್ತೊಂದೆಡೆ ದಾರಿ ಹುಡುಕುತ್ತಿದ್ದಾರೆ.

Last Updated : May 15, 2021, 11:00 PM IST

ABOUT THE AUTHOR

...view details