ಗಂಗಾವತಿ: ಇಲ್ಲಿನ ಮಹಾವೀರ ವೃತ್ತದಲ್ಲಿರುವ ಮದ್ಯದ ಅಂಗಡಿಯಲ್ಲಿ ಮದ್ಯ ಖಾಲಿಯಾದ ಪರಿಣಾಮ, ಪೊಲೀಸರ ಎದುರಲ್ಲೆ ಕೆಲ ಕುಡುಕರು ಗಲಾಟೆ ಮಾಡಿ ಕಲ್ಲು ತೂರಾಟ ಕೂಡ ಮಾಡಿದ್ದಾರೆ.
ಮದ್ಯಸಿಗದಿದ್ದಕ್ಕೆ ಕುಪಿತರಾದ ಕುಡುಕರು... ಅಂಗಡಿ ಮೇಲೆ ಕಲ್ಲು ತೂರಾಟ - ನ ಮಹಾವೀರ ವೃತ್ತ
ನಗರದ ಬಾರ್ವೊಂದರಲ್ಲಿ ಬೇಗ ಮದ್ಯ ಖಾಲಿಯಾಯಿತು. ಮಹಾವೀರ ವೃತ್ತದಲ್ಲಿ ಗಂಟೆಗಳ ಕಾಲ ಸರದಿಯಲ್ಲಿ ನಿಂತರೂ ಎಣ್ಣೆ ಸಿಗದಿದ್ದರಿಂದ ಕುಪಿತರಾದ ಎಣ್ಣೆ ಗಿರಾಕಿಗಳಲ್ಲಿ ಕೆಲವರು ಅಸಮಧಾನಗೊಂಡು ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ.
ಅಂಗಡಿ ಮೇಲೆ ಕಲ್ಲು ತೂರಾಟ
ಲಾಕ್ಡೌನ್ ಬಳಿಕ ಇದೇ ಮೊದಲ ಬಾರಿಗೆ ಸರ್ಕಾರ ಎಣ್ಣೆ ಮಾರಾಟ ಮಾಡಲು ಅವಕಾಶ ನೀಡಿದ ಪರಿಣಾಮ ಬಹುತೇಕ ಅಂಗಡಿಗಳಲ್ಲಿ ಜನ ಜಂಗುಳಿ ಕಂಡು ಬಂತು. ಆದರೆ, ನಗರದ ಬಾರ್ವೊಂದರಲ್ಲಿ ಬಹುಬೇಗ ಮದ್ಯ ಖಾಲಿಯಾಯಿತು. ಮಹಾವೀರ ವೃತ್ತದಲ್ಲಿ ಗಂಟೆಗಳ ಕಾಲ ಸರದಿಯಲ್ಲಿ ನಿಂತರೂ ಎಣ್ಣೆ ಸಿಗದಿದ್ದರಿಂದ ಕುಪಿತರಾದ ಗಿರಾಕಿಗಳಲ್ಲಿ ಕೆಲವರು ಅಸಮಧಾನಗೊಂಡು ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಲಾಟೆ ನಿಯಂತ್ರಿಸಿದರು.