ಕರ್ನಾಟಕ

karnataka

ETV Bharat / state

ರಾಮನನ್ನು ಜನರು ಹೃದಯ ಮಂದಿರದಲ್ಲಿ‌ ಸ್ಥಾಪಿಸಿಕೊಳ್ಳಬೇಕು: ಕರಿಬಸವ ಶಿವಾಚಾರ್ಯ ಸ್ವಾಮೀಜಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿರುವುದು ಸಂತಸದ ಸಂಗತಿ. ಶ್ರೀರಾಮನ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮದ್ದಾನಿಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Shri Karibasawa Shivacharya Swamiji
ಮದ್ದಾನಿಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ

By

Published : Jan 15, 2021, 3:49 PM IST

Updated : Jan 15, 2021, 4:45 PM IST

ಕುಷ್ಟಗಿ (ಕೊಪ್ಪಳ): ಶ್ರೀರಾಮ ಮಂದಿರ ನಿಧಿ ನೀಡುವ ಮೂಲಕ ಶ್ರೀರಾಮನನ್ನು ಜನರು‌ ಹೃದಯ ಮಂದಿರದಲ್ಲಿ‌ ಸ್ಥಾಪಿಸಿಕೊಳ್ಳಬೇಕು ಎಂದು ಮದ್ದಾನಿಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಮದ್ದಾನಿಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕುಷ್ಟಗಿಯ ಕಾರ್ಗಿಲ್ ವೃತ್ತದಲ್ಲಿ ನಿಧಿ ಸಮರ್ಪಣೆ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.

ಇದನ್ನೂ ಓದಿ:ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ...

ಜಿಲ್ಲಾ ಬಿಜೆಪಿ ಅದ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​​ ಮಾತನಾಡಿ, ಮರ್ಯಾದ ಪುರುಷೋತ್ತಮ ರಾಮನಿಗೆ ಭವ್ಯ ಮಂದಿರ ನಿರ್ಮಿಸಬೇಕು ಎಂಬುದು ದೇಶದ ಬಹು ಸಂಖ್ಯಾತರ ಕನಸಾಗಿದೆ. ಇದೀಗ ಅದು ಈಡೇರಿದೆ. ನಿಧಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸುವುದೇ ಪುಣ್ಯವೆಂದು ಭಾವಿಸಿ ಈ ನಿಧಿ ಸಂಗ್ರಹ ಅಭಿಯಾನ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

Last Updated : Jan 15, 2021, 4:45 PM IST

ABOUT THE AUTHOR

...view details