ಕೊಪ್ಪಳ:ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆ ಕೊಪ್ಪಳದ ಗಂಗಾವತಿ ಬಳಿಯ ಹಲವು ಗ್ರಾಮಗಳಲ್ಲಿ ಸ್ವಯಂ ಪ್ರೇರಣೆಯಿಂದ ತಮ್ಮೂರಿಗೆ ಬರುವ ಯಾವುದೇ ವಾಹನಗಳು ತಪಾಸಣೆಗೆ ಒಳಗಾಗದೇ ಬರುವಂತಿಲ್ಲ ಎಂದು ಚೆಕ್ ಪೋಸ್ಟ್ ನಿರ್ಮಿಸಿಕೊಳ್ಳಲಾಗಿದೆ.
ಕೊರೊನಾ ಭೀತಿಗೆ ಗ್ರಾಮಸ್ಥರಿಂದಲೇ ಸ್ವಯಂ ಪ್ರೇರಣೆಯಿಂದ ಚೆಕ್ ಪೋಸ್ಟ್ ನಿರ್ಮಾಣ
ಕೊರೊನಾ ವೈರಸ್ ಹರಡುವ ಭೀತಿಯಿಂದ ದೇಶವೇ ಲಾಕ್ಡೌನ್ ಆಗಿದೆ. ಆದರೂ ಗ್ರಾಮಗಳಿಗೆ ವಾಹನದ ಮೂಲಕ ಆಗಮಿಸುವವರು ಹೆಚ್ಚಾಗುತ್ತಿರುವ ಹಿನ್ನೆಲೆ ಕೊಪ್ಪಳದ ಗಂಗಾವತಿ ಬಳಿಯ ಹಲವು ಗ್ರಾಮಗಳಲ್ಲಿ ಸ್ವಯಂ ಪ್ರೇರಣೆಯಿಂದ ತಮ್ಮೂರಿಗೆ ಬರುವ ಯಾವುದೇ ವಾಹನಗಳು ತಪಾಸಣೆಗೆ ಒಳಗಾಗದೇ ಬರುವಂತಿಲ್ಲ ಎಂದು ಚೆಕ್ ಪೋಸ್ಟ್ ನಿರ್ಮಿಸಿಕೊಳ್ಳಲಾಗಿದೆ.
ಕೊರೊನಾ ಭೀತಿಗೆ ಗ್ರಾಮಸ್ಥರಿಂದಲೇ ಸ್ವಯಂ ಪ್ರೇರಣೆಯಿಂದ ಚೆಕ್ಪೋಸ್ಟ್
ತಾಲೂಕಿನ ಮರಳಿ ಹೋಬಳಿಯ ಅಯೋಧ್ಯೆ ಗ್ರಾಮದಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಯಾವುದೇ ವಾಹನಗಳು ಬಂದರೂ ಮೊದಲಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಟ್ಟ ನಂತರವಷ್ಟೇ ಗ್ರಾಮಕ್ಕೆ ಕರೆದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತಿ ಇಒ ಮೋಹನ್, ಗ್ರಾಮಸ್ಥರನ್ನು ಪ್ರಶಂಸಿಸಿದ್ದಲ್ಲದೆ ವೈರಸ್ ಬಗ್ಗೆ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು.