ಕುಷ್ಟಗಿ(ಕೊಪ್ಪಳ): ಮಾಸಾಶನ ಸಿಗದ ಹಿನ್ನೆಲೆ ಬ್ಯಾಂಕ್ ಬಳಿ ಆಗಮಿಸಿರುವ ಫಲಾನುಭವಿಗಳು ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿರುವುದು ಕಂಡುಬಂತು.
ಆಧಾರ್ ಲಿಂಕ್ ಮಾಡಿಸಲು ಬಂದು ಸಾಮಾಜಿಕ ಅಂತರ ಮರೆತ ಜನ - ಸಾಮಾಜಿಕ ಭದ್ರತೆ ಯೋಜನೆ ಅಡಿ
ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಲು ಬಂದವರು ಸಾಲಾಗಿ ನಿಲ್ಲುವ ಬದಲು ಮರದ ಕೆಳಗೆ ಗುಂಪು ಗುಂಪಾಗಿ ಕೂತಿದ್ದರು.
![ಆಧಾರ್ ಲಿಂಕ್ ಮಾಡಿಸಲು ಬಂದು ಸಾಮಾಜಿಕ ಅಂತರ ಮರೆತ ಜನ People rush in front of bank at kushtagi](https://etvbharatimages.akamaized.net/etvbharat/prod-images/768-512-7107589-686-7107589-1588913807189.jpg)
ಆಧಾರ್ ಲಿಂಕ್ ಮಾಡಿಸಲು ಬಂದು ಸಾಮಾಜಿಕ ಅಂತರ ಮರೆತ ಜನ
ಸಾಮಾಜಿಕ ಭದ್ರತೆ ಯೋಜನೆ ಅಡಿ ಫಲಾನುಭವಿಗಳಿಗೆ ಮಾಸಾಶನ ಸಿಗದ ಹಿನ್ನೆಲೆ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಸಲು ಬಂದವರು ಸಾಲಾಗಿ ನಿಲ್ಲುವ ಬದಲು ಮರದ ಕೆಳಗೆ ಗುಂಪು ಗುಂಪಾಗಿ ಕೂತಿದ್ದರು.
ಈ ಕುರಿತು ತಹಶೀಲ್ದಾರ್ ಸಿದ್ದೇಶ್ ಎಂ ಅವರು ಪ್ರತಿಕ್ರಿಯಿಸಿ, ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗದ ಹಿನ್ನೆಲೆಯಲ್ಲಿ ಸುಮಾರು 400 ಜನರಿಗೆ ಮಾಸಾಶನ ಮಂಜೂರಾಗಿಲ್ಲ. ವಾರದಲ್ಲಿ ಈ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು.