ಗಂಗಾವತಿ/ಕೊಪ್ಪಳ :ಕಳೆದ ಎರಡು ವರ್ಷದಿಂದ ಬಿಡದೇ ಕಾಡುತ್ತಿರುವ ಕೊರೊನಾ ವೈರಸ್ ತೊಲಗಲಿ ಎಂದು ಹರಕೆ ಹೊತ್ತು ಜನ ನಿಗಿನಿಗಿ ಕೆಂಡದಲ್ಲಿ ಓಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಪುರಾತನ ಕಾಲದ ಕೋಟೆ ಪ್ರದೇಶದ (ಕಿಲ್ಲಾ ಏರಿಯಾ) ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ದೇಗುಲದ ಪ್ರಾಂಗಣದಲ್ಲಿ ಅಗ್ನಿಕುಂಡ ಮಹೋತ್ಸವ ನಡೆಯಿತು. ಪ್ರತಿ ವರ್ಷ ಅಗ್ನಿಕುಂಡ ಮಹೋತ್ಸವ ನಡೆಯುತ್ತದೆ. ಆದರೆ, ಕಳೆದ ಎರಡು ವರ್ಷದಿಂದ ಅಗ್ನಿಕುಂಡ ಮಹೋತ್ಸವ ಸೇರಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿರಲಿಲ್ಲ.