ಕರ್ನಾಟಕ

karnataka

ETV Bharat / state

ಕುಡಿಯುವ ನೀರಿನ ವ್ಯತ್ಯಯ: ಕುಷ್ಟಗಿ ಪುರಸಭೆ ಸದಸ್ಯನ ಮನೆ ಮುಂದೆ ನಾರಿಯರ ಧರಣಿ - ಕುಷ್ಟಗಿಯಲ್ಲಿ ಕುಡಿಯುವ ನೀರಿನ ವ್ಯತ್ಯಯ

ಪುರಸಭೆ ಸದಸ್ಯರಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಮಸ್ಯೆಯನ್ನು ಪರಿಹರಿಸದೇ ಪುರಸಭೆ ಕಡೆ ಅಧಿಕಾರಿಗಳು ಬೆರಳು ಮಾಡುತ್ತಿದ್ದಾರೆಂದು ಆರೋಪಿಸಿದ ಅವರು, ಸಮಸ್ಯೆ ಇದೆ ವಾರ್ಡ್​ಗೆ ಬನ್ನಿ ಎಂದರೆ 4 ನೇ ವಾರ್ಡ್​ ಸದಸ್ಯ ವಸಂತ ಮೇಲಿನಮನಿ ಅವರನ್ನು ಕಳುಹಿಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

people-protest-against-municipality-due-to-water-problem
ಪುರಸಭೆ ಸದಸ್ಯನ ಮನೆ ಮುಂದೆ ಧರಣಿ

By

Published : Mar 14, 2022, 5:50 PM IST

ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡ್​ನಲ್ಲಿ ಕುಡಿಯುವ ನೀರಿನ ಹಾಹಾಕಾರಕ್ಕೆ ಜನ ಬೇಸತ್ತಿದ್ದಾರೆ. ಹೀಗಾಗಿ, ಖಾಲಿ‌ ಕೊಡಗಳನ್ನು ಹಿಡಿದ ಮಹಿಳೆಯರು, ಮಕ್ಕಳು, ಯುವಕರು ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಮನೆಯ ಮುಂದೆ ಧರಣಿ ನಡೆಸಿದರು. ನಂತರ ಮುಖ್ಯ ಬೀದಿಯಲ್ಲಿ ಖಾಲಿ ಕೊಡಗಳ ಮೆರವಣಿಗೆ ನಡೆಸಿ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯನ ಮನೆ ಮುಂದೆ ಧರಣಿ

ಕಳೆದ 20 ದಿನಗಳಿಂದ 24x7 ನದಿ ನೀರು ಇಲ್ಲ, ಅಂತರ್ಜಲ ನೀರು ಇಲ್ಲ, ಸಮಸ್ಯೆ ತೀವ್ರವಾಗಿದ್ದರೂ ಟ್ಯಾಂಕರ್ ನೀರೂ ಸಹ ಇಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ನೀರು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ಸ್ಪಂದಿಸದೇ ನಿರ್ಲಕ್ಷ್ಯ ಮುಂದುವರಿಸಿದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಖಾಲಿ ಕೊಡಗಳೊಂದಿಗೆ ಜನ ಪುರಸಭೆಗೆ ಮುತ್ತಿಗೆ ಹಾಕಿದರು. ಈ ವೇಳೆ ಪುರಸಭೆ ಸದಸ್ಯ ಚಿರಂಜೀವಿ ಹಿರೇಮಠ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ನಾಗರಾಜ್ ಬನ್ನಿಗೋಳ ಮಾತನಾಡಿ, ಕಳೆದ 20 ದಿನಗಳಿಂದ ಸದರಿ ವಾರ್ಡ್​ಗೆ ನೀರು ಪೂರೈಕೆ ಇಲ್ಲ. ಈಗಾಗಲೇ ಬೇಸಿಗೆ ಶುರುವಾಗಿದ್ದು, ನೀರಿಗಾಗಿ ಹೈರಾಣ ಆಗಿದ್ದೇವೆ. ಇದಕ್ಕೆ ಪರ್ಯಾಯ ಕ್ರಮವಹಿಸಿಲ್ಲ. ವಾರ್ಡ್​ನಲ್ಲಿ ಅಭಿವೃದ್ಧಿ ಕೆಲಸ ನಡೆದಿಲ್ಲ. ಬೀದಿ ವಿದ್ಯುದ್ದೀಪ ಅಳವಡಿಸಿಲ್ಲ. ಸೋಲಾರ್ ವಿದ್ಯುದ್ದೀಪವನ್ನು ಜನವಸತಿ ಪ್ರದೇಶದಲ್ಲಿ ಅಳವಡಿಸದೇ ಲಾಡ್ಜ್ ಬಳಿ ಅಳವಡಿಸಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಸದಸ್ಯರಾಗಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸಮಸ್ಯೆಯನ್ನು ಪರಿಹರಿಸದೇ ಪುರಸಭೆ ಕಡೆ ಅಧಿಕಾರಿಗಳು ಬೆರಳು ಮಾಡುತ್ತಿದ್ದಾರೆಂದು ಆರೋಪಿಸಿದ ಅವರು, ಸಮಸ್ಯೆ ಇದೆ ವಾರ್ಡ್​ಗೆ ಬನ್ನಿ ಎಂದರೆ 4 ನೇ ವಾರ್ಡ್​ ಸದಸ್ಯ ವಸಂತ ಮೇಲಿನಮನಿ ಅವರನ್ನು ಕಳುಹಿಸಿದ್ದಾರೆಂದು ನಾಗರಾಜ ಬನ್ನಿಗೋಳ ಆರೋಪಿಸಿದರು.

ಈ ವೇಳೆ ಜಂಬಣ್ಣ ಬೂದರ್, ಯಲ್ಲಪ್ಪ ವಗ್ಗರ, ಮಹಾಂತೇಶ ಗದ್ದಿ, ರಾಮಪ್ಪ ಬನ್ನಿಗೋಳ, ದುರಗಪ್ಪ ಕಟ್ಟಿಹೊಲ ಸೇರಿದಂತೆ ಮಹಿಳೆಯರು, ಮಕ್ಕಳು ಈ ದಿಢೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 5ನೇ ವಾರ್ಡ್​ ಸದಸ್ಯ ಚಿರಂಜೀವಿ ಹಿರೇಮಠ ಪ್ರತಿಕ್ರಿಯಿಸಿ, 24x7 ನೀರು ಪೂರೈಸುವ ತಾಂತ್ರಿಕ ಸಮಸ್ಯೆಗೆ ನೀರಿನ ಸಮಸ್ಯೆಯಾಗಿದೆ. ಕಳೆದ ಮೂರು ದಿನಗಳಿಂದ ಇಡೀ ಪಟ್ಟಣಕ್ಕೆ ನೀರಿಲ್ಲ.‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದರು.

ಓದಿ:ಹನೂರಲ್ಲಿ ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್​ : ವೃದ್ಧೆ ಸೇರಿ ಇಬ್ಬರು ಸಾವು, ಐವರು ಪ್ರಯಾಣಿಕರ ಸ್ಥಿತಿ ಗಂಭೀರ

ABOUT THE AUTHOR

...view details