ಕರ್ನಾಟಕ

karnataka

ETV Bharat / state

ಪಾದಚಾರಿ ಮಾರ್ಗದಲ್ಲಿ ಪ್ಲಾಸ್ಟಿಕ್​​ ಶೀಟ್ ಅಳವಡಿಕೆ.... ಕುಷ್ಟಗಿಯಲ್ಲಿ ಸ್ಥಳೀಯರ ಆಕ್ರೋಶ - ಕುಷ್ಟಗಿ ಕೊಪ್ಪಳ ಲೆಟೆಸ್ಟ್ ನ್ಯೂಸ್

ರಾಷ್ಟ್ರೀಯ ಹೆದ್ದಾರಿ - 50ರ ಕೃಷ್ಣಗಿರಿ ಕಾಲೋನಿ ಬಳಿ ಅಂಡರ್​ ​ಪಾಸ್​​​​ನ ​​​ ಪಾದಚಾರಿ ಮಾರ್ಗದಲ್ಲಿ ಕಾಟಾಚಾರಕ್ಕೆ ಎಂದು ಶೀಟ್​(ಮೇಲ್ಚಾವಣಿ) ಅಳವಡಿಸಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಗಡಿನ ಶೀಟ್​ ಬದಲು ಪ್ಲಾಸ್ಟಿಕ್​​ ಶೀಟ್​​ ಹಾಕಲಾಗುತ್ತಿರುವುದೇ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

people outrage against Plastic sheet on underpass road
ಕುಷ್ಟಗಿ: ​​​ಪಾದಚಾರಿ ಮಾರ್ಗದಲ್ಲಿ ಕಾಟಾಚಾರಕ್ಕೆಂದು ಪ್ಲಾಸ್ಟಿಕ್​​ ಶೀಟ್ ಅಳವಡಿಕೆ....ಸ್ಥಳೀಯರಿಂದ ಆಕ್ರೋಶ

By

Published : May 30, 2020, 5:21 PM IST

ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದಲ್ಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ - 50ರ ಕೃಷ್ಣಗಿರಿ ಕಾಲೋನಿ ಬಳಿ ಅಂಡರ್​​ಪಾಸ್​​​ ಪಾದಚಾರಿ ಮಾರ್ಗದಲ್ಲಿ ಕಾಟಾಚಾರಕ್ಕೆ ಎಂದು ಪ್ಲಾಸ್ಟಿಕ್​​​ ಶೀಟ್​(ಮೇಲ್ಚಾವಣಿ) ಅಳವಡಿಸಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿತ್ತಿದ್ದಾರೆ.

ಅಂಡರ್​​ಪಾಸ್ ಪಾದಚಾರಿ ಮಾರ್ಗಕ್ಕೆ ಛಾವಣಿ ಇಲ್ಲದೇ ಮಳೆ ನೀರು ನಿಂತು ಉಂಟಾದ ಸಮಸ್ಯೆಯನ್ನು ಸ್ಥಳೀಯರು ಸಂಸದ ಕರಡಿ ಸಂಗಣ್ಣ ಅವರ ಗಮನ ಸೆಳೆದಿದ್ದರು. ಅವರು ಖುದ್ದಾಗಿ ಅಲ್ಲಿಗೆ ಭೇಟಿ ನೀಡಿದ ಬಳಿಕ, ಗುತ್ತಿಗೆ ವಹಿಸಿಕೊಂಡಿರುವ ಒಎಸ್​ಇ ಕಂಪನಿ ಎಚ್ಚೆತ್ತುಕೊಂಡು ಇದೀಗ ಪ್ಲಾಸ್ಟಿಕ್​​​ ಛಾವಣಿ ಹೊದಿಕೆಯ ಕೆಲಸ ಕೈಗೆತ್ತಿಕೊಂಡಿದ್ದು, ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.

ಪಾದಚಾರಿ ಮಾರ್ಗದಲ್ಲಿ ಕಾಟಾಚಾರಕ್ಕೆಂದು ಪ್ಲಾಸ್ಟಿಕ್​​ ಶೀಟ್ ಅಳವಡಿಕೆ....ಸ್ಥಳೀಯರಿಂದ ಆಕ್ರೋಶ

ಸಂಬಂಧಿಸಿದ ಒಎಸ್​​ಇ ಕಂಪನಿ ಸಂಸದರ ಮುಂದೆ ಜಿಐ ಶೀಟ್​​ (ತಗಡಿನ ಶೀಟ್)​​ ಹಾಕುವುದಾಗಿ ಒಪ್ಪಿಕೊಂಡಿತ್ತು, ಆದರೀಗ ಪ್ಲಾಸ್ಟಿಕ್ ಶೀಟ್ ಅಳವಡಿಸಲಾಗುತ್ತಿದೆ. ಪ್ಲಾಸ್ಟಿಕ್ ಶೀಟ್ ಸುಡು ಬಿಸಿಲನ್ನು ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಎನ್ನುತ್ತಾರೆ ಕೃಷ್ಣಗಿರಿ ನಿವಾಸಿ - ಸಿವಿಲ್ ಇಂಜಿನಿಯರ್ ವೀರೇಶ ಬಂಗಾರ ಶೆಟ್ಟರ್.

ಪ್ಲಾಸ್ಟಿಕ್​​ ಶೀಟ್​ ಅಳವಡಿಸಿ ಎರಡೇ ವರ್ಷಕ್ಕೆ ಹರಿದು ಹೋಗುವ ಸಾಧ್ಯತೆಗಳಿವೆ. ಸದ್ಯ ಪ್ಲಾಸ್ಟಿಕ್ ಶೀಟ್​​ ಹೊದಿಕೆಯ ಕಾರ್ಯ ಕಾಟಾಚಾರದ್ದಾಗಿದೆ. ಬಿದ್ದ ಮಳೆ ನೀರು ಹೊರ ಹೋಗದೇ ಅಂಡರ್​​ಪಾಸ್​​​​​ನಲ್ಲಿ ಇಳಿಯುವ ಸಾಧ್ಯತೆ ಇದೆ. ಒಎಸ್​​ಇ ಕಂಪನಿಯು ಜಿಐ ಶೀಟ್ ಅಳವಡಿಸಿಕೊಡುವುದಾಗಿ ಸಂಸದರ ಮುಂದೆ ಒಪ್ಪಿಕೊಂಡು, ಇದೀಗ ಪ್ಲಾಸ್ಟಿಕ್ ಶೀಟ್​ ಹಾಕಲು ಮುಂದಾಗಿರುವುದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ABOUT THE AUTHOR

...view details