ಗಂಗಾವತಿ :ಅನಾರೋಗ್ಯದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಕೆಲವರು ಅಡ್ಡಿಪಡಿಸಿದ ಘಟನೆ ನಗರದ ಶರಣ ಬಸವೇಶ್ವರ ಕ್ಯಾಂಪ್ನಲ್ಲಿ ನಡೆದಿದೆ.
ಶರಣಬಸವೇಶ್ವರ ಕ್ಯಾಂಪ್ನ 43 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಗ್ರಾಮದ ಹೊರವಲಯಕ್ಕೆ ತೆಗೆದುಕೊಂಡು ಬಂದಾಗ ಅಲ್ಲಿ ಗಾಳೆಮ್ಮ ಕ್ಯಾಂಪ್ನ ನಿವಾಸಿಗಳು ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಅನಾರೋಗ್ಯ ಪೀಡಿತನ ಅಂತ್ಯ ಸಂಸ್ಕಾರಕ್ಕೂ ತಕರಾರು ಅದು ಕೃಷಿ ಭೂಮಿಯಾಗಿದ್ದು, ಇಲ್ಲಿ ಯಾವುದೇ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಬಾರದು ಎಂದು ಗಾಳೆಮ್ಮ ಕ್ಯಾಂಪ್ನ ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಅಡ್ಡಿಪಡಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು.
ಕಳೆದ 20 ವರ್ಷದಿಂದ ಗೋನಾಳ ಸೀಮಾದ ನಾಲಾ ಬರ್ಮಾದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿಕೊಂಡು ಬಂದಿದ್ದು, ಇಲ್ಲಿಯೇ ಮಾಡುತ್ತೇವೆ ಎಂದು ಶರಣಬಸವೇಶ್ವರ ಕ್ಯಾಂಪ್ನ ಜನರು ಪಟ್ಟು ಹಿಡಿದರು. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.