ಗಂಗಾವತಿ (ಕೊಪ್ಪಳ):ತಾಲೂಕಿನ ಆರ್ಹಾಳ ಗ್ರಾಮದಲ್ಲಿ ನಡೆದ ಮೋಹರಂ ಹಬ್ಬ ಆಚರಣೆಯ ಸಂದರ್ಭದಲ್ಲಿ ಕಾನ್ಟ್ಟೇಬಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಕಪಕ್ಷೀಯವಾಗಿ ದೂರು ದಾಖಲಿಸಿದ್ದಾರೆ ಎಂದು ನಾಯಕ ಸಮುದಾಯದ ಮುಖಂಡರು ದೂರಿದ್ದಾರೆ.
ಪ್ರಕರಣದಲ್ಲಿ ಸಂತ್ರಸ್ಥ ಸೋಮನಾಥ ನೀಡಿರುವ ದೂರು ಸಮಂಜಸವಾಗಿದ್ದರೂ ಕೇವಲ ಒಂದೇ ಸಮುದಾಯವನ್ನು ಏಕೆ ಗುರಿ ಮಾಡಲಾಗಿದೆ ಎಂಬುವುದನ್ನು ದೂರು ದಾಖಲಿಸಿಕೊಂಡ ಅಧಿಕಾರಿ ಸ್ಪಷ್ಟನೆ ನೀಡಬೇಕು, ಪ್ರಕರಣದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.