ಕರ್ನಾಟಕ

karnataka

ETV Bharat / state

ಸರ್ಕಾರದ ನಿಯಮಗಳಿಗಿಲ್ಲ ಕಿಮ್ಮತ್ತು... ಕೊಪ್ಪಳ ಮಾರುಕಟ್ಟೆಯಲ್ಲಿ ಜನಜಂಗುಳಿ - Corona 2nd Wave

ಕೊಪ್ಪಳ ನಗರದ ಮಾರುಕಟ್ಟೆಯಲ್ಲಿ 10 ಗಂಟೆಯ ನಂತರ ವ್ಯಾಪಾರ ಜೋರಾಗಿತ್ತು. ನಾಳೆ ರಂಜಾನ್ ಹಿನ್ನೆಲೆಯಲ್ಲಿ ಜನರು ಸಾಮಾಜಿಕ ಅಂತರ ಮರೆತು ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.

koppal
ಕೊಪ್ಪಳ ಮಾರುಕಟ್ಟೆಯಲ್ಲಿ ಜನಜಂಗುಳಿ

By

Published : May 13, 2021, 12:41 PM IST

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೊರೊನಾ ನಿಯಮಗಳನ್ನು ಉಲ್ಲಂಘಸಿ ಗುಂಪು ಸೇರುತ್ತಿದ್ದಾರೆ.

ಕೊಪ್ಪಳ ಮಾರುಕಟ್ಟೆಯಲ್ಲಿ ಜನಜಂಗುಳಿ

ಕೊಪ್ಪಳ ನಗರದ ಮಾರುಕಟ್ಟೆಯಲ್ಲಿ 10 ಗಂಟೆಯ ನಂತರವೂ ವ್ಯಾಪಾರ ಜೋರಾಗಿತ್ತು. ನಾಳೆ ರಂಜಾನ್ ಹಿನ್ನೆಲೆಯಲ್ಲಿ ಜನರು ಸಾಮಾಜಿಕ ಅಂತರ ಮರೆತು ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.

ನಗರದ ಎಲ್ಲಾ ರಸ್ತೆಗಳು ಜನಜಂಗುಳಿ ಹಾಗೂ ವಾಹನಗಳಿಂದ ತುಂಬಿದ್ದವು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿರುವುದು ಕಂಡುಬಂತು.

ಓದಿ:ಆಕ್ಸಿಜನ್‌ ಕೊರತೆ ಚಾಮರಾಜನಗರ ದುರಂತಕ್ಕೆ ಕಾರಣ; ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್​ಚಿಟ್​

ABOUT THE AUTHOR

...view details