ಗಂಗಾವತಿ:ಸ್ಥಳೀಯರಿಗೆ ಮುನ್ಸೂಚನೆ ನೀಡದೇ ವಿವಾದಿತ ಭೂಮಿಯಲ್ಲಿ ದಿಢೀರ್ ಪ್ರವೇಶಿಸಿ ಹದ್ದುಬಸ್ತ್ ಮಾಡಲು ಯತ್ನಿಸಿದ ತಹಶಿಲ್ದಾರ್ ಹಾಗೂ ಕಂದಾಯ ಸಿಬ್ಬಂದಿಯನ್ನು ಸಾರ್ವಜನಿಕರು ಕೂಡಿ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಕಾರಟಗಿಯಲ್ಲಿ ನಡೆದಿದೆ. ಸ್ವತಃ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸುಗೂರು ಸಮ್ಮುಖದಲ್ಲಿ ಈ ಘಟನೆ ನಡೆದಿದೆ.
ಜನರ ಆಕ್ರೋಶದ ಮುಂದೆ ಶಾಸಕ ಹಾಗೂ ಅಧಿಕಾರಿಗಳು ನಿರುತ್ತರವಾಗಿದ್ದರು. ಕಾರಟಗಿ ತಾಲೂಕಿನ ಜೂರಟಗಿ ಗ್ರಾಮದ ಸrರ್ವೇ ನಂಬರ್ 11ರಲ್ಲಿ ಈ ಘಟನೆ ನಡೆದಿದೆ. ಉದ್ದೇಶಿತ ಈ ಜಮೀನು ವಿವಾದಲ್ಲಿದ್ದು, ಸ್ಥಳೀಯರ ಪ್ರಕಾರ ಪಟ್ಟಾ ಭೂಮಿ ಇದು. ಇನ್ನಷ್ಟು ಸರ್ಕಾರಿ ಭೂಮಿ ಇದ್ದು, ಇಲ್ಲಿ ದಶಕಗಳ ಕಾಲದಿಂದ ಬಡವರು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಇದೀಗ ಏಕಾಏಕಿ ಶಾಸಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಭೂಮಿಗೆ ಪ್ರವೇಶಿಸಿದ್ದಾರೆ.