ಕುಷ್ಟಗಿ:ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ 2 ಕಿ.ಮೀ. ವ್ಯಾಪ್ತಿಯ ದೋಟಿಹಾಳ ಕ್ರಾಸ್ ಹಾಗೂ ಅಗ್ನಿಶಾಮಕ ದಳ ಠಾಣೆಯ ಬಳಿ ಹೆದ್ದಾರಿಗೆ ಸೂಚನಾ ಫಲಕ ಅಳವಡಿಸದೆ ಇರುವುದು ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ.
ದೋಟಿಹಾಳ ಕ್ರಾಸ್ ಬಳಿ ಇಳಕಲ್ ಮೂಲಕ ವಿವಿಧ ಗ್ರಾಮಗಳಿಂದ ಕುಷ್ಟಗಿ ಪಟ್ಟಣ ಪ್ರವೇಶಿಸಲು ಸುಗಮವಾಗಿ ಹೆದ್ದಾರಿ ಕ್ರಾಸ್ ಮಾಡಲು ಮೇಲ್ಸೇತುವೆಗೆ ಹೊಂದಿಕೊಂಡಿರುವ ಕೆಳ ಸೇತುವೆ ಇದೆ. ಬಹುತೇಕ ಜನರು ಟೆಂಗುಂಟಿ ಕ್ರಾಸ್ ಮೂಲಕ ಹೋಗದೇ ಅಪಾಯಕಾರಿಯಾಗಿ ಶಾರ್ಟ್ ಕಟ್ ರೂಟ್ ಮೂಲಕ ಹೆದ್ದಾರಿ ಕ್ರಾಸ್ ಮಾಡುತ್ತಿರುವುದು ಕಂಡು ಬಂದಿದೆ.