ಗಂಗಾವತಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ತಮ್ಮ ಊರುಗಳಿಗೆ ಹೋಗುವ ಉದ್ದೇಶಕ್ಕೆ ಗಂಟೆಗಟ್ಟಲೆ ಕಾಯುತ್ತಿದ್ದ ಜನ ಸಾರಿಗೆ ಬಸ್ಗಳು ಬಂದ ತಕ್ಷಣ ಬಸ್ ಹತ್ತಲು ಏಕಕಾಲಕ್ಕೆ ಮುಗಿಬೀಳುತ್ತಿದ್ದಾರೆ.
ಸಾಮಾಜಿಕ ಅಂತರ ಮರೆತು ಬಸ್ ಹತ್ತಲು ಮುಗಿಬಿದ್ದ ಜನ - people not maintaining social gap
ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಜನ ಸಾರಿಗೆ ಬಸ್ ಬಂದ ತಕ್ಷಣ ಸಾಮಾಜಿಕ ಅಂತರ ಮರೆತು ಬಸ್ ಹತ್ತಲು ಮುಗಿಬಿದ್ದರು.

ಸಾರಿಗೆ ವಾಹನಕ್ಕೆ ಮುಗಿಬಿದ್ದ ಜನ
ಬೆರಳೆಣಿಕೆಯಷ್ಟು ಪ್ರಮಾಣದ ವಾಹನಗಳು ಸೇವೆ ನೀಡುತ್ತಿರುವುದರಿಂದ ದೂರದೂರಿನ ಪ್ರಯಾಣಕ್ಕೆ ಸಾರ್ವಜನಿಕರು ಗಂಟೆಗಟ್ಟಲೆ ವಾಹನಗಳಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಾಹನಗಳು ಬಂದ ತಕ್ಷಣ ಸೀಟು ಸಿಗುವುದಿಲ್ಲ ಎಂಬ ಆತಂಕದಿಂದ ಮುಗಿಬೀಳುತ್ತಿದ್ದಾರೆ.
ಸಾಮಾಜಿಕ ಅಂತರ ಮರೆತು ಸಾರಿಗೆ ವಾಹನಕ್ಕೆ ಮುಗಿಬಿದ್ದ ಜನ
ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ ಜನ ವಾಹನಗಳನ್ನು ಏರಲು ಯತ್ನಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಹರಡುವಿಕೆಯ ಭೀತಿ ಮಧ್ಯೆ ಸಾರ್ವಜನಿಕರು ಹಾಗೂ ಪ್ರಯಾಣಿಕರ ಈ ವರ್ತನೆ ಆತಂಕಕ್ಕೆ ಕಾರಣವಾಗಿದೆ.