ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಸೇತುವೆ ತಡೆಗೋಡೆಗೆ ಕಾರ್ ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು - ಕುಕನೂರು ಪೊಲೀಸ್​ ಠಾಣಾ ವ್ಯಾಪ್ತಿ

ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಸೇತುವೆ ತಡೆಗೋಡೆಗೆ ಕಾರ್ ಡಿಕ್ಕಿಯಾಗಿ ದುರಂತ ಘಟಿಸಿದೆ.

ರಸ್ತೆ ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ
ರಸ್ತೆ ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ

By

Published : Feb 16, 2023, 6:29 PM IST

Updated : Feb 16, 2023, 6:45 PM IST

ಭೀಕರ ರಸ್ತೆ ಅವಘಡ

ಕೊಪ್ಪಳ : ಜಿಲ್ಲೆಯ ಕುಕುನೂರು ತಾಲೂಕು ಬನ್ನಿಕೊಪ್ಪ ಗ್ರಾಮದ ಬಳಿ ಇರುವ ರಸ್ತೆ ಸೇತುವೆ ತಡೆಗೋಡೆಗೆ ಕಾರ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಹಾಗು ಇಬ್ಬರು ಪುರುಷರು ಸೇರಿದ್ದಾರೆ. ಇವರು ತೆಲಂಗಾಣ ಮೂಲದವರೆಂದು ತಿಳಿದು ಬಂದಿದೆ. ಕುಕನೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಓದುವುದು ಬೇಡ ಮದುವೆಯಾಗು ಎಂದು ಪೀಡಿಸಿದ ಯುವಕ: ಮನನೊಂದು ಯುವತಿ ಆತ್ಮಹತ್ಯೆ

ಚಿಕ್ಕೋಡಿ ಅಪಘಾತ: ಕಾರ್-ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟ್ ಬಳಿ ಸಂಭವಿಸಿದೆ. ಮೃತಪಟ್ಟ ಬೈಕ್​ ಸವಾರರಿಬ್ಬರು ಸಹೋದರರು. ಚಿಕ್ಕೋಡಿ ತಾಲೂಕಿನ ನವಳಿಹಾಳ ಗ್ರಾಮದ ಶಿವಕುಮಾರ ರಾಜು ಘೋಷೆ (25), ಅಶ್ವಿನ್​ಕುಮಾರ ರಾಜು ಘೋಷೆ (23) ಮೃತರೆಂದು ತಿಳಿದುಬಂದಿದೆ.

ಇವರು ಸ್ವಗ್ರಾಮದಿಂದ ಗೋಕಾಕ್​ ತಾಲೂಕಿನ ಶಿಂಧಿಕುರಬೇಟ ಎಂಬೆಡೆಗೆ ಹೊರಟಿದ್ದರು. ಕಾರ್ ಕಬ್ಬೂರು ಗ್ರಾಮದ ಕಡೆಯಿಂದ ಬರುತ್ತಿತ್ತು. ಬೆಳಕೂಡ ಗೇಟ್ ಬಳಿ ಕಾರ್ ಚಾಲಕ ಮುಂದಿದ್ದ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಎದುರುಗಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಮೃತದೇಹ ಪತ್ತೆ: ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ದೊರೆತಿದೆ. ನದಿಯಲ್ಲಿ ಮೃತದೇಹ ತೇಲುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಈಜುಪಟುಗಳ ಸಹಾಯದಿಂದ ಶವ ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಇದುವರೆಗೆ ಗುರುತು ಪತ್ತೆಯಾಗಿಲ್ಲ.

ಟ್ರ್ಯಾಕ್ಟರ್-ಬೈಕ್​ ಡಿಕ್ಕಿಯಾಗಿ ವ್ಯಕ್ತಿ ಸಾವು: ಹುಬ್ಬಳ್ಳಿಯ ನವನಗರದ ಬಳಿ ಟ್ರ್ಯಾಕ್ಟರ್​ ಮತ್ತು ಬೈಕ್​ ಡಿಕ್ಕಿಯಾಗಿ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪರುಶುರಾಮ್​ ವಾಲಿಕಾರ್​ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪರುಶುರಾಮ್​ ಮತ್ತು ಅವರ ಸ್ನೇಹಿತ ಬೈಕ್‌ನಲ್ಲಿ ಚಲಿಸುತ್ತಿದ್ದಾಗ ಎದುರಿಗೆ ಬಂದ ಟ್ರ್ಯಾಕ್ಟರ್​ಗೆ ಬೈಕ್​ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ:ಬೆಂಗಳೂರಿನ ಜಿಟಿ ಗ್ಯಾರೇಜ್ ಟೆಕ್​ನಲ್ಲಿ ಅಗ್ನಿ ಅವಘಡ: 10ಕ್ಕೂ ಅಧಿಕ ಕಾರುಗಳು ಸುಟ್ಟು ಭಸ್ಮ

Last Updated : Feb 16, 2023, 6:45 PM IST

ABOUT THE AUTHOR

...view details