ಕೊಪ್ಪಳ: ಕೊರೊನಾ ವೈರಸ್ ಹಬ್ಬುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನರು ಮಾತ್ರ ಈ ಬಗ್ಗೆ ಜಾಗೃತರಾಗುತ್ತಿಲ್ಲ.
ಸಾಮಾಜಿಕ ಅಂತರ ಮರೆತ ಜನ: ಆತಂಕದಲ್ಲಿ ಕೊಪ್ಪಳ ಆರ್ಟಿಒ ಸಿಬ್ಬಂದಿ - social distance
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯ ಎಂದು ಸರ್ಕಾರ ಹೇಳುತ್ತಿದ್ದರೂ ಜನರು ಮಾತ್ರ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂಬುದಕ್ಕೆ ಸಾಕ್ಷಿ ಈ ಮೇಲಿನ ಚಿತ್ರ.
ಸಾಮಾಜಿಕ ಅಂತರ ಪಾಲನೆ ಮಾಯ
ಕೊರೊನಾ ನಿಯಂತ್ರಿಸಲು ಸಾಮಾಜಿಕ ಅಂತರ ಪಾಲಿಸಿ ಎಂದು ಸಾರಿ, ಸಾರಿ ಸರ್ಕಾರ ಹೇಳುತ್ತಿದ್ದರೂ ಜನ ಕ್ಯಾರೇ ಎನ್ನುತ್ತಿಲ್ಲ. ನಗರದ ಹೊರ ವಲಯದಲ್ಲಿ ಆರ್ಟಿಓ ಕಚೇರಿಗೆ ಬಂದ ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ಕೌಂಟರ್ ಮುಂದೆ ಮುಗಿಬಿದ್ದಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿ ಗೋಗರೆದರೂ, ಅಯ್ಯೋ ಹೋಗಿ ಸ್ವಾಮಿ ಎನ್ನುವಷ್ಟರ ಮಟ್ಟಿಗೆ ಜನ ನಿರ್ಲಕ್ಷ್ಯ ತೋರಿದರು. ಹೀಗಾಗಿ, ಅಲ್ಲಿನ ಸಿಬ್ಬಂದಿ ಭಯದಲ್ಲಿಯೇ ಕೆಲಸ ಮಾಡಬೇಕಾಗಿದೆ.